ಉಸಿರಾಟದ ಸಮಸ್ಯೆಯಿಂದ ವ್ಯಕ್ತಿ ಮರಣ; ದಫನ ಕಾರ್ಯ ನಿರ್ವಹಿಸಿದ ಇಂಡಿಯನ್ ಸೋಶಿಯಲ್ ಫೋರಂ

Update: 2017-03-16 10:06 GMT

ಸೌದಿ ಅರೇಬಿಯಾ, ಮಾ.16: ಸುಮಾರು 2 ವರ್ಷಗಳಿಂದ ಉತ್ತರ ಪ್ರದೇಶದ ಉಸ್ಮಾನ್ ಅನ್ವರ್ ಎಂಬವರು ಬುರೈದಃದಲ್ಲಿ  ಚಾಲಕರಾಗಿ  ಕೆಲಸ ಮಾಡುತಿದ್ದರು. ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವಾರಗಳಿಂದ ಚಳಿ ಅಧಿಕವಾದ ಕಾರಣ, ತಾಪಮಾನವನ್ನು ಸಹಿಸಲಾಗದೆ ಬಿಸಿ ಕಾಯಲು ಬೇಕಾಗಿ ತನ್ನ ಕೊಠಡಿಯಲ್ಲಿ ಹೀಟರನ್ನು ಇಟ್ಟು ಮಲಗಿದ್ದರು. ಯಂತ್ರದಲ್ಲಿ  ಸಮಸ್ಯೆಯಿದ್ದ ಕಾರಣ ಕೊಠಡಿಯಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಉಸಿರಾಟದ ಸಮಸ್ಯೆಯಿಂದ ಬಳಲಿ ಉಸ್ಮಾನ್ ಅನ್ವರ್  ಅಕಾಲಿಕ ಮರಣ ಹೊಂದಿದ್ದರು.   

ಈ ವಿಷಯವನ್ನು ತಿಳಿದು ಇಂಡಿಯನ್ ಸೋಶಿಯಲ್ ಪೋರಂ ಬುರೈದಃ  ಕಾರ್ಯಕರ್ತರಾದ ಅಯಾಝ್ ಕೃಷ್ಣಾಪುರ ಮತ್ತು ಇರ್ಫಾನ್ ಅಡ್ಡೂರು  ದಫನ ಕಾರ್ಯ ನಿರ್ವಹಿಸುವ ಸಲುವಾಗಿ ಮೃತರ ಪ್ರಾಯೋಜಕರನ್ನು ಮುಖತಃ ಭೇಟಿಯಾಗಿ ಮೃತ ದೇಹವನ್ನು ದಫನಮಾಡಲು ಬೇಕಾದ ದಾಖಲೆಗಳನ್ನು ನೀಡುವ ಬಗ್ಗೆ ಸಮಾಲೋಚನೆ ನಡೆಸಿದರು.

ಇತ್ತ ಫೋರಂನ ಸದಸ್ಯರಾದ ಮುಬಾರಕ್ ಬೆಂಗಳೂರು, ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿ ಬೇಕಾಗಿರುವ ಎಲ್ಲಾ  ದಾಖಲೆಗಳನ್ನು ಸಿದ್ದಪಡಿಸಿ ಅಂತ್ಯ ಸಂಸ್ಕಾರ ಮಾಡಲು ಬೇಕಾದ ಒಪ್ಪಿಗೆ ಪತ್ರವನ್ನುಪಡೆದುಕೊಂಡರು. ಹಾಗೇ ಭಾರತದಲ್ಲಿರುವ ಕುಟುಂಬಸ್ಥರ ಸಮ್ಮತದೊಂದಿಗೆ ಆದಿತ್ಯವಾರ ಅಸರ್  ನಮಾಝಿನ ನಂತರ ಬುರೈದದಲ್ಲಿರುವ ಮಸ್ಜಿದ್ ಕಳೀಜ್ ದಫನಭೂಮಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉಸ್ಮಾನ್ ಅನ್ವರ್ ರವರ ಮೃತ ದೇಹವನ್ನು ದಫನ ಮಾಡಲಾಯಿತು.

ಮೃತ ಉಸ್ಮಾನ್ ಅನ್ವರ್ ಹೆಂಡತಿ ಮತ್ತು 2 ಮಕ್ಕಳನ್ನು ಅಗಲಿದ್ದಾರೆ. ಇವರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯು ಸಂತಾಪ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News