ಯುಎಇಯಲ್ಲಿ ಹೊಸ ವರ್ಷದಿಂದ ಖಾಸಗಿ ಕಂಪೆನಿಗಳಿಗೆ ಶೇ. 5 ವ್ಯಾಟ್: ಕಟ್ಟಡ ಬಾಡಿಗೆಯಲ್ಲಿ ಹೆಚ್ಚಳ!

Update: 2017-03-16 10:19 GMT

ಅಬುಧಾಬಿ,ಮಾ. 16: ನಿಗದಿತ ವರಮಾನ ಇರುವ ಖಾಸಗಿ ಸಂಸ್ಥೆಗಳಿಗೆ ಮತ್ತು ಭೂಮಿ ಮತ್ತು ಕಟ್ಟಡದ ಮಾಲಕರಿಗೆ ಯುಎಇಯಲ್ಲಿ ಶೇ. 5ರಷ್ಟು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿಧಿಸುವ ಕರಡು ಕಾನೂನನ್ನು ಫೆಡರಲ್ ನ್ಯಾಶನಲ್ ಕೌನ್ಸಿಲ್ ಹೊರಡಿಸಿದೆ. ಫೆಡರಲ್ ಸರಕಾರಕ್ಕೆ ಹೆಚ್ಚು ಆದಾಯ ಸಿಗುವಂತೆ ಮಾಡುವುದು, ಆರ್ಥಿಕ ಸ್ಥಿರತೆಯನ್ನು ದೃಢಗೊಳಿಸುವುದು ಮುಂತಾದ ಎಲ್ಲ ರೀತಿಯಲ್ಲಿ ಅನ್ವಯವಾಗುವ ಕಾನೂನುಕ್ರಮಗಳಿರುವ ಕರಡು ನೀತಿಯನ್ನು ಬುಧವಾರ ಕೌನ್ಸಿಲ್ ಘೋಷಿಸಿದೆ. ಇದು 2018 ಜನವರಿ ಒಂದರಿಂದ ಜಾರಿಗೆ ಬರಲಿದೆ.

 3.7 ದಿರ್ಹಂಗಿಂತ ಹೆಚ್ಚುಆದಾಯ ಇರುವ ಎಲ್ಲ ಖಾಸಗಿ ಕಂಪೆನಿಗಳು ವ್ಯಾಟ್ ಭರಿಸಬೇಕಾಗಿದೆ. ಕಟ್ಟಡಗಳನ್ನು ಬಾಡಿಗೆಗೆ ಕೊಡುವವರು ಕೂಡಾ ವ್ಯಾಟ್‌ನ ವ್ಯಾಪ್ತಿಗೆ ಬರಲಿದ್ದಾರೆ. ಆದ್ದರಿಂದ ದೇಶದ ಕಟ್ಟಡ ಬಾಡಿಗೆ ಜನವರಿ 2018ರಿಂದ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಕರಡು ಕಾನೂನಿನಲ್ಲಿ ತೆರಿಗೆ ವಿನಾಯಿತಿ, ಕಾನೂನು ಉಲ್ಲಂಘನೆಗೆ ಶಿಕ್ಷೆಗಳನ್ನು ಕೂಡಾ ಪ್ರಸ್ತಾಪಿಸಲಾಗಿದೆ. ಈಗ ನಾಲ್ಕೂವರೆ ಲಕ್ಷ ಖಾಸಗಿ ಕಂಪೆನಿಗಳು ಯುಎಇಯಲ್ಲಿದ್ದು, ಇವುಗಳ ಸಂಖ್ಯೆ ಅತೀಶೀಘ್ರದಲ್ಲಿ ಆರುಸಾವಿರದಷ್ಟಾಗುವುದು ಎನ್ನಲಾಗಿದೆ. ಇವುಗಳಿಂದಾಗಿ ಹೆಚ್ಚು ಆಂತರಿಕ ಉತ್ಪನ್ನ ದರ ಹೆಚ್ಚಬಹುದೆಂದು ಆರ್ಥಿಕ ವಿಷಯಗಳ ಸಹ ಸಚಿವ ಉಬೈದ್ ಬಿನ್ ಹುಮೈದ್ ಅಲ್ ತಾಯಿರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News