ಒಮನ್‌ನಲ್ಲಿ ಭಾರತದ ವ್ಯಕ್ತಿ ನಿಧನ
Update: 2017-03-16 15:58 IST
ಮಸ್ಕತ್,ಮಾ. 16: ಕೇರಳ ಮಲಪ್ಪುರಂನ ವ್ಯಕ್ತಿ ಒಮನ್‌ನಲ್ಲಿ ನಿಧನರಾಗಿದ್ದಾರೆ.
ಕೋಟ್ಟಕ್ಕಲ್ ಕಲ್ಲಿಂಗಲ್ ಬಾವರ ಪುತ್ರ ಶಿಹಾಬ್(39)ನಿಧನರಾದ ವ್ಯಕ್ತಿ , ಮಂಗಳವಾರ ರಾತ್ರಿ ಅನಾರೋಗ್ಯದಿಂದ ಅವರನ್ನು ಸ್ಥಳೀಯ ಇರಾನಿ ಕ್ಲಿನಿಕ್ ಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದಾಗ ಕಿಡ್ನಿರೋಗ ಇರುವುದು ಗೊತ್ತಾಗಿದೆ. ನಂತರ ಸೊಹಾರ್ ಬದರ್ ಅಲ್‌ಸಮಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತವಾಯಿತು.
ಮೃತದೇಹವನ್ನು ಇಂದು ಊರಿಗೆ ಕೊಂಡು ಹೋಗುವುದಕ್ಕಾಗಿ ಆವಶ್ಯಕ ಕಾನೂನು ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಮೃತ ಶಿಹಾಬ್ ಬುರೈಮಿಯ ಮಾರ್ಕೆಟ್‌ನಲ್ಲಿ ದುಡಿಯುತ್ತಿದ್ದರು. ಕಳೆದ ಹದಿನೈದು ವರ್ಷಗಳಿಂದ ಆವರು ಒಮನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.