ದುಬೈ: ಚಾಲಕರಹಿತ ಕಾರು ನಿರ್ಮಾಣಕ್ಕೆ ವೇಗ

Update: 2017-03-17 09:58 GMT

 ದುಬೈ, ಮಾ. 17: ಒಂದು ಗಂಟೆಯಲ್ಲಿ 5000 ಪ್ರಯಾಣಿಕರನ್ನು ಅವರು ಬಯಸುವ ಸ್ಥಳಕ್ಕೆ ತಲುಪಿಸಿಬಿಡುವ ಚಾಲಕರಹಿತ ವಾಹನಗಳು ದುಬೈಯಲ್ಲಿ ತಯಾರಾಗುತ್ತಿದೆ. ದುಬೈ ಬ್ಲೂವಾಟರ್ಸ್ ದ್ವೀಪ ಮತ್ತು ದುಬೈ ಮೆಟ್ರೋಕ್ಕೆ ಪ್ರಯಾಣಿಕರನ್ನು ಕರದೊಯ್ಯುತ್ತಿರುವ ವಾಹನವನ್ನು ಡಚ್ ಕಂಪೆನಿ ತಯಾರಿಸುತ್ತಿದೆ.

2035ಕ್ಕಾಗುವಾಗ ದುಬೈನಲ್ಲಿ ಶೇ. 25ರಷ್ಟು ವಾಹನಗಳು ಸ್ವಯಂಚಾಲಿತ ವಾಹನಗಳು ಇರಬೇಕೆನ್ನುವ ಉದ್ದೇಶಕ್ಕೆ ಚಾಲಕರಹಿತ ಕಾರು ಸಹಾಯಕವಾಗಿದೆ. ದುಬೈ ಜೆಬಿಆರ್ ಮತ್ತು ದುಬೈ ಮೆರಿನ್ ಸಮೀಪದ ಸಾಗರದ ಎದುರು ವ್ಯಾಪಾರ, ಪ್ರವಾಸ ಸೌಕರ್ಯಗಳನ್ನು ಏರ್ಪಡಿಸಲು ಬ್ಲೂವಾಟರ್ಸ್ನ ಯೋಜನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News