ಕುವೈಟ್‌ನಲ್ಲಿ ಬಡಗಿ ಕೆಲಸಕ್ಕೂ ಸ್ವದೇಶಿಗಳು!

Update: 2017-03-18 07:08 GMT

 ಕುವೈಟ್ ಸಿಟಿ,ಮಾ. 18: ವಿದೇಶಿ ಕಾರ್ಮಿಕರನ್ನು ಆಶ್ರಯಿಸುವುದನ್ನು ಕೊನೆಗೊಳಿಸಲಿಕ್ಕಾಗಿ ಸ್ವದೇಶೀಯರಿಗೆ ಎಲ್ಲ ಕೆಲಸಗಳಲ್ಲಿ ತರಬೇತಿ ನೀಡುವ ಯೋಜನೆಯನ್ನು ಕುವೈಟ್ ಸರಕಾರ ಹಮ್ಮಿಕೊಳ್ಳುತ್ತಿದೆ. . ಕುವೈಟ್ ಪುರುಷರಿಗೆ ಬಡಗಿ ಕೆಲಸ, ಪೈಂಟಿಂಗ್, ಇಲೆಕ್ಟ್ರಿಕಲ್, ಏರ್ ಕಂಡೀಷನ್, ಸೆಟಲೈಟ್, ವಾಹನ ರಿಪೇರಿ ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುವುದು. ಮಹಿಳೆಯರಿಗೆ ಅಡುಗೆ ಕೆಲಸ, ಮನೆಸಜ್ಜೀಕರಣ, ಮಕ್ಕಳ ಪರಿಪಾಲನೆ, ಬಟ್ಟೆತೊಳೆಯುವುದು ಮುಂತಾದ ಕೆಲಸಗಳಲ್ಲಿ ತರಬೇತಿ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಕುವೈಟ್ ಸರಕಾರದ ಮಾನವ ಶಕ್ತಿ ಪುನರ್ರಚನಾ ಕಾರ್ಯಕ್ರಮದ ಕಾರ್ಯದರ್ಶಿ ಜನರಲ್ ಫೌಝಿ ಅಲ್ ಮಜ್ದಲಿ ತಿಳಿಸಿದ್ದಾರೆ.

  ವಿದೇಶಿಯರ ನೆರವಿಲ್ಲದೆ ಸ್ವದೇಶಿಗಳಿಂದಲೇ ಕೆಲಸ ಮಾಡಿಸುವುದು ಸರಕಾರದ ಉದ್ದೇಶವಾಗಿದೆ. ಈ ಕೆಲಸಗಳನ್ನು ಹೇಗೆ ಸ್ವದೇಶಿಯರಿಂದ ಮಾಡಿಸಬಹುದು ಎನ್ನುವ ಅಧ್ಯಯನ ಈ ನಿಟ್ಟಿನಲ್ಲಿ ಮೊದಲು ನಡೆಯಲಿದೆ. ನಿಗದಿತ ಸಮಯದಲ್ಲಿ ಸ್ವದೇಶಿ ಪ್ರಜೆಗಳಿಗೆ ಆಸಕ್ತಿ ಇರುವ ಕೆಲಸದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಪುನರ್ರಚನಾ ಕಾರ್ಯಕ್ರಮದ ಕಾರ್ಯದರ್ಶಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News