ಗಲ್ಫ್ ನಿಂದ ಮರಳಿದವರಿಗೆ ಸ್ವ ಉದ್ಯೋಗಕ್ಕೆ ಆರ್ಥಿಕ ಸಾಲ ನೀಡುವುದು ಸ್ವಾಗತಾರ್ಹ: ಮುಹಮ್ಮದ್ ಅಲಿ ಉಚ್ಚಿಲ್

Update: 2017-03-18 13:18 GMT

ಅಬುಧಾಬಿ, ಮಾ.18: ಗಲ್ಫ್ ನಲ್ಲಿ ದುಡಿಯುವ ಪ್ರವಾಸಿಗಳು ಆರ್ಥಿಕ ಸಂಕಷ್ಟದಿಂದ ತವರಿಗೆ ಮರಳಿದರೆ ಕೇರಳದ ಮಾದರಿಯಲ್ಲೆ ಸ್ವ ಉದ್ಯೋಗಕ್ಕೆ ಆರ್ಥಿಕ ಸಾಲ ನೀಡುವುದು ಹಾಗೂ ಅವರಿಗೆ ಉದ್ದಿಮೆ ಸ್ಥಾಪಿಸಲು ತರಬೇತಿ ನೀಡುವ ಮಹತ್ವದ ಯೋಜನೆಯನ್ನು ಮುಖ್ಯಮಂತ್ರಿಯವರು ಮಂಡಿಸಿದ ಬಜೆಟ್ ನಲ್ಲಿ ಘೋಷಿಸಿದ್ದು ಸ್ವಾಗತಾರ್ಹವಾಗಿದೆ ಎಂದು ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ತಿಳಿಸಿದ್ದಾರೆ.

ಗಲ್ಫ್ ಪ್ರವಾಸಿಗಳ ಕಷ್ಟವನ್ನು ಮನದಟ್ಟು ಮಾಡಿ ಅದನ್ನು ಪರಿಹರಿಸುವ ಪ್ರಯತ್ನವನ್ನು ಮಾಡಿದ ಸಿಎಂ ಸಿದ್ದರಾಮಯ್ಯನವರಿಗೆ, ಕರಾವಳಿ ಕರ್ನಾಟಕದ ಮಂತ್ರಿಗಳಿಗೆ, ಜನಪ್ರತಿನಿಧಿಗಳಿಗೆ  NRI ಫೋರಂ, ಕರ್ನಾಟಕ ಮತ್ತು ಇದಕ್ಕೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ .

ಇದರೊಂದಿಗೆ ಈ ಯೋಜನೆ ಸಫಲವಾಗಲು ಬ್ಯಾರೀಸ್  ವೆಲ್ಫೇರ್ ಫೋರಂ ಸಲಹೆಗಳನ್ನು ನೀಡಿದೆ:

1)  ಈ ಯೋಜನೆಯು ಎಲ್ಲಾ ಕನ್ನಡಿಗರಿಗೂ ಅನ್ವಯವಾಗುದರಿಂದ ಇದನ್ನು ಕಾರ್ಯಗತ ಮಾಡುವ ಹೊಣೆಯನ್ನು ಅಲ್ಪಸಂಖ್ಯಾತ ಇಲಾಖೆಯಿಂದ ತೆಗೆದು, ಕೇರಳದ ಮಾದರಿಯಲ್ಲಿ ಒಂದು ಸ್ವಾಯತ್ತೆ ಸಂಸ್ಥೆಗೆ ವಹಿಸಬೇಕು . ಅದನ್ನು Non Resident Kannadigaas Affairs Dept ಎಂಬ ಹೆಸರಿನಿಂದ ಕರೆಯಬೇಕು.

2) ಇದು ಒಂದು ಸರಕಾರದ ಯೋಜನೆಯಾದರೂ ಇದರ ರೂಪುರೇಷೆ ತಯಾರು ಮಾಡುವಾಗ ಎಲ್ಲಾ ಕನ್ನಡಿಗ ಪ್ರವಾಸಿ ಸಂಘಟನೆಗಳನ್ನು ಅದರಲ್ಲೂ ಕರಾವಳಿ ಕರ್ನಾಟಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ,ಅವರಿಂದ ಸಲಹೆ, ಸಹಕಾರವನ್ನು ಸ್ವೀಕರಿಸುವುದು. ಸ್ವದ್ಯೋಗ ತರಬೇತಿಯ ಜೊತೆಗೆ ಕನಿಷ್ಠ ಒಂದು ಅವಧಿಯ ವರೆಗೆ ತಿಂಗಳ ಸ್ಟೈಪೆಂಡ್ ಕೊಡುವುದು ಉತ್ತಮವಾಗಿದೆ.

ಅತ್ಯಂತ ಪ್ರಾಮಾಣಿಕವಾಗಿ, ತ್ವರಿತಗತಿಯಲ್ಲಿ ಪಾರದರ್ಶಿಕ ಮತ್ತು ದಕ್ಷತೆಯಿಂದ ಕಾರ್ಯಗತವಾದಾಗ ಈ ಯೋಜನೆ ಫಲಪ್ರದವಾಗುವುದುವದು ಎಂದು ತಿಳಿಸಿದ್ದಾರೆ. ಸರಕಾರವು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗಲ್ಫ್ ಪ್ರವಾಸಿಗರ ಅನೇಕ ವರ್ಷಗಳ ಆಗ್ರಹಕ್ಕೆ ಮೊಹರು ಒತ್ತಿದ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News