ಶಾರ್ಜ ವಾಣಿಜ್ಯ ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ: ಭಾರೀ ನಷ್ಟ

Update: 2017-03-20 11:11 GMT

ಶಾರ್ಜ, ಮಾ. 20: ವಾಣಿಜ್ಯ ಪ್ರದೇಶದಲ್ಲಿ ಅಂಗಡಿಯೊಂದರಲ್ಲಿ ರವಿವಾರ 1:30ಕ್ಕೆ ಬೆಂಕಿಅನಾಹುತ ನಡೆದಿದ್ದು ಭಾರೀ ನಾಶ,ನಷ್ಟ ಸಂಭವಿಸಿದೆ. ವಾಹನಗಳ ಬಿಡಿಭಾಗ ಮಾರಾಟ ಸಂಸ್ಥೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಂಗಡಿಯ ಸಾಮಗ್ರಿಗಳು,ದಾಖಲೆಗಳು ಸುಟ್ಟು ಭಸ್ಮವಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ಗೊತ್ತಾಗಿಲ್ಲ. ಸಿವಿಲ್ ಡಿಫೆನ್ಸ್ ತಂಡ ಅತ್ಯಂತ ಜಾಗರೂಕವಾಗಿ ಬೆಂಕಿ ನಂದಿಸುವ ಕೆಲಸವನ್ನು ಮಾಡಿದ್ದರಿಂದ ಸಮೀಪದ ಇತರ ಅಂಗಡಿಗಳಿಗೆ ಬೆಂಕಿ ಹರಡಿಲ್ಲ.

ಅನಾಹುತ ಸಂಭವಿಸುವಾಗ ಹಲವಾರು ಮಂದಿ ಅಂಗಡಿಯೊಳಗಿದ್ದರು. ಬೆಂಕಿಹಿಡಿದದ್ದನ್ನು ನೋಡಿ ಅವರು ತಕ್ಷಣ ಹೊರಗೆ ಧಾವಿಸಿ ಬಂದಿದ್ದಾರೆ. ಕೆಲವು ಕೆಲಸಗಾರರು ಹೊಗೆ ಸೇವನೆಯಿಂದ ಅಸ್ವಸ್ಥರಾಗಿದ್ದರು. ನಂತರ ಅವರು ಸುಧಾರಿಸಿಕೊಂಡಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News