ಮಸ್ಕತ್‌ನಲ್ಲಿ ನಾಳೆ ಮಳೆ, ಬಿರುಗಾಳಿ ಸಾಧ್ಯತೆ

Update: 2017-03-20 11:16 GMT

ಮಸ್ಕತ್, ಮಾ. 20: ಅರಬಿ ಸಮುದ್ರದಲ್ಲಾದ ವಾಯುಭಾರದ ಕಾರಣದಿಂದ ಮಂಗಳವಾರದಿಂದ ಭಾರಿ ಮಳೆ, ಬಿರುಗಾಳಿ ಆಗುವ ಸಾಧ್ಯತೆ ಇದೆಎಂದು ಹವಾಮಾನ ನಿರೀಕ್ಷಣಾ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಶನಿವಾರದವರೆಗೂ ಹವಾಮಾನ ವೈಪರೀತ್ಯ ಮುಂದುವರಿಯುವ ಸಾಧ್ಯತೆಯಿದ್ದು, ಮುಸಂದಂ ಗವರ್ನರೇಟ್‌ನಲ್ಲಿ ಆಕಾಶದಲ್ಲಿ ಮೋಡಾವೃತವಾಗಿದೆ. ಇಲ್ಲಿ ಗುಡುಗುಮಿಂಚುಗಳೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಂತರ ಬುರೈಮಿ, ದಾಹಿರ, ಈಶಾನ್ಯಬಾತಿನ, ಮಸ್ಕತ್, ದಾಖಿಲಿಯ, ಶರ್ಕಿಯ ಗವರ್ನರೇಟ್‌ಗಳಲ್ಲಿ ಮಳೆ,ಹಾಗೂ ಬಲವಾದ ಗಾಳಿ ಬೀಸಲಿದೆ. ಅಲ್ ವುಸ್ತ, ದೋಫಾರ್ ಗವರ್ನರೇಟ್‌ಗಳಲ್ಲಿ ಆಕಾಶ ಮೋಡಾವೃತವಾಗಿದ್ದರೂ ಇಲ್ಲಿ ಹೆಚ್ಚು ಮಳೆಸುರಿಯುವ ಸಾಧ್ಯತೆಯಿಲ್ಲ ಎಂದು ಹವಾಮಾನ ನಿರೀಕ್ಷಣಾ ಕೇಂದ್ರ ಟ್ವಿಟರ್ ಮೂಲಕ ತಿಳಿಸಿದೆ.

ಸಮುದ್ರ ಪ್ರಕ್ಷುಬ್ಧಗೊಳ್ಳಬಹುದು. ಆದ್ದರಿಂದ ಬೆಸ್ತರು ಎಚ್ಚರಿಕೆ ಪಾಲಿಸಬೇಕಾಗಿದೆ. ಒಮನ್ ಸಮುದ್ರ ಮತ್ತು ಮುಸಂದಂ ತೀರದಲ್ಲಿ ಸಮುದ್ರದ ಅಲೆಗಳು ಎರಡರಿಂದ ಮೂರು ಮೀಟರ್ ಎತ್ತರದಲ್ಲಿ ಬಡಿದಪ್ಪಳಿಸಲಿದೆ ಎಂದು ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಫೆಬ್ರವರಿ ಮೊದಲವಾರದಿಂದಲೇ ಮಸ್ಕತ್ ಸಹಿತ ಒಮನ್‌ನ ಹಲವು ಭಾಗಗಳಲ್ಲಿ ಮಳೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News