ಉಮ್ರಾಕ್ಕೆ ತೆರಳಿದ ಭಾರತದ ವ್ಯಕ್ತಿ ಬಹರೈನ್ ವಿಮಾನ ನಿಲ್ದಾಣದಲ್ಲಿ ನಿಧನ
Update: 2017-03-20 16:48 IST
ಮನಾಮ,ಮಾ. 20: ಉಮ್ರಾ ನಿರ್ವಹಿಸಲು ಹೊರಟಿದ್ದ ಕೇರಳದ ಕೊಲ್ಲಂನ ಯಾತ್ರಾರ್ಥಿಯೊಬ್ಬರು ಬಹರೈನ್ ವಿಮಾನ ನಿಲ್ದಾಣದಲ್ಲಿ ರವಿವಾರ ಮಧ್ಯಾಹ್ನ 12:30ಕ್ಕೆ ಮೃತಪಟ್ಟಿದ್ದಾರೆ. ಮೃತರನ್ನು ನಿಲಮೇಲ್ ಶಾಹಿನಾ ಮಂಝಿಲ್ ಅಬ್ದುಲ್ ಹಕೀಂ(69) ಎಂದು ಗುರುತಿಸಲಾಗಿದೆ.
ತಿರುವನಂತಪುರಂನಿಂದ ಹೊರಟ ಗಲ್ಫ್ ಏರ್ ವಿಮಾನದಲ್ಲಿ ಬಹರೈನ್‌ನಲ್ಲಿಳಿದ ಅವರು ಜಿದ್ದಾಕ್ಕೆ ಹೋಗುವ ವಿಮಾನಕ್ಕೆ ಕಾಯುತ್ತಿದ್ದ ಅವರು ನಿಲ್ದಾಣದ ಲಾಂಚ್‌ನಲ್ಲಿ ಕುಳಿತಿದ್ದಾಗ ಅನಾರೋಗ್ಯಕ್ಕೊಳಗಾಗಿದ್ದರು. ತಕ್ಷಣ ಅವರಿಗೆ ತುರ್ತು ಚಿಕಿತ್ಸೆ ನೀಡಲಾದರೂ ಪ್ರಯೋಜನವಾಗಲಿಲ್ಲ. ಅವರ ಜೊತೆಯಲ್ಲಿ ಉಮ್ರಾನಿರ್ವಹಿಸಲು ಬಂದಿದ್ದ ಅವರ ಪತ್ನಿ ಈವೇಳೆ ಜೊತೆಯಲ್ಲಿದ್ದರು. ಕತರ್‌ನಲ್ಲಿರುವ ಅವರ ಪುತ್ರ ನುಜುಂ ಬಹರೈನ್‌ನಿಂದ ಬಂದು ತಂದೆಯ ಮೃತದೇಹವನ್ನುಊರಿಗೆ ಕೊಂಡುಹೋಗಲಿದ್ದಾರೆ ಎಂದು ತಿಳಿದು ಬಂದಿದೆ.