ಕೆಸಿಎಫ್ ಒಲಯ್ಯ ಸೆಕ್ಟರ್ 4ನೆ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಮುಸ್ತಫ ಝೈನಿ ಆಯ್ಕೆ

Update: 2017-03-20 11:37 GMT

ರಿಯಾದ್, ಮಾ.20: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ಅಧೀನದಲ್ಲಿರುವ ಕೆಸಿಎಫ್  ಒಲಯ್ಯ ಸೆಕ್ಟರ್ ಇದರ 4ನೆ  ವಾರ್ಷಿಕ ಮಹಾಸಭೆ ಮಾ.16ರಂದು ಒಲಯ್ಯದಲ್ಲಿ  ನಡೆಯಿತು.

ಸಭೆಯ ಉದ್ಘಾಟನೆಯನ್ನು  ಮುಬಾರಕ್ ಸಖಾಫಿ ನೆರವೇರಿಸಿದರು. ಸೆಕ್ಟರ್ ಅಧ್ಯಕ್ಷ  ಇಸ್ಮಾಯಿಲ್ ಜೋಗಿಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ರಾಷ್ಟೀಯ ಅಧ್ಯಕ್ಷ ಡಿ.ಪಿ ಯೂಸುಫ್  ಸಖಾಫಿ ಉಸ್ತಾದ್ "ಜೀವನ ನಾಡಿಗಾಗಿ, ನಾಳೆಗಾಗಿ'' ಎಂಬ  ವಿಷಯದ ಕುರಿತು ಉಪನ್ಯಾಸ ನೀಡಿದರು.

2015-16ನೆ ಸಾಲಿನ ವರದಿಯನ್ನು ಒವೈಸ್ ಹಾಗು ಲೆಕ್ಕ ಪತ್ರವನ್ನು ಮುಹಮ್ಮದ್ ಪಕ್ಷಿಕೆರೆ ಮಂಡಿಸಿದರು. ಸದ್ರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚನೆಯ ನೇತೃತ್ವವನ್ನು ರಿಯಾದ್ ಝೋನಲ್ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ ವಹಿಸಿದ್ದರು.  ನೂತನ ಕೋಶಾಧಿಕಾರಿ ಕಲೀಂ ಮದನಿ ಕನೀಬಾಗೆ ಆಶಂಸೆ ಭಾಷಣ ಮಾಡಿದರು.

ಅಬ್ಬಾಸ್ ಸಅದಿ ಕಿರಾಅತ್ ಪಠಿಸಿದರು. ಮುಸ್ತಫ ಝೈನಿ ಉಸ್ತಾದ್ ಸ್ವಾಗತಿಸಿದರು. ಹಕೀಂ ಮುದುಂಗಾರುಕಟ್ಟೆ ವಂದಿಸಿದರು. ಕಲೀಂ ಮದನಿ ಮುದುಂಗಾರುಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.

2017-19 ನೂತನ ಸಮಿತಿ ವಿವರ: ಅಧ್ಯಕ್ಷ: ಮುಸ್ತಫ ಝೈನಿ, ಪ್ರ.ಕಾರ್ಯದರ್ಶಿ: ಹಕೀಂ ಮುದುಂಗಾರುಕಟ್ಟೆ, ಕೋಶಾಧಿಕಾರಿ: ಎಮ್.ಕೆ ಕಲೀಂ ಮದನಿ ಕನೀಬಾಗೆ, ಶಿಕ್ಷಣ ವಿಭಾಗಅಧ್ಯಕ್ಷ: ಮುಬಾರಕ್ ಸಖಾಫಿ, ಶಿಕ್ಷಣ ವಿಭಾಗ ಕಾರ್ಯದರ್ಶಿ: ನಝೀರ್ ಪುರುಷಂಗೋಡಿ, ಸಾಂತ್ವನ ವಿಭಾಗ ಅಧ್ಯಕ್ಷ: ಇಬ್ರಾಹಿಂ ಕುಂತೂರು, ಸಾಂತ್ವನ ವಿಭಾಗ ಕಾರ್ಯದರ್ಶಿ: ಹನೀಫ್ ಕೆಮ್ಮಾರ, ಸಂಘಟನಾ ವಿಭಾಗ ಅಧ್ಯಕ್ಷ: ಫವಾಝ್ ಕೆ.ಸಿ.ರೋಡ್, ಸಂಘಟನಾ ವಿಭಾಗ ಕಾರ್ಯದರ್ಶಿ: ಅಬ್ಬಾಸ್ ಸಅದಿ, ಕಛೇರಿ ವಿಭಾಗ ಅಧ್ಯಕ್ಷ: ಒವೈಸ್, ಕಛೇರಿ ವಿಭಾಗ ಕಾರ್ಯದರ್ಶಿ: ಮನ್ಸೂರ್ ಉಳ್ಳಾಲ, ಪಬ್ಲಿಶಿಂಗ್ ವಿಭಾಗ ಅಧ್ಯಕ್ಷ:  ಇಬ್ರಾಹಿಂ ತುರ್ಕಳಿಕೆ, ಪಬ್ಲಿಶಿಂಗ್ ವಿಭಾಗ ಕಾರ್ಯದರ್ಶಿ: ಬಶೀರ್ ಕೆ.ಸಿ.ರೋಡ್

ಕಾರ್ಯಕಾರಿ ಸಮಿತಿ ಸದಸ್ಯರು: ಇಸ್ಮಾಯಿಲ್ ಜೋಗಿಬೆಟ್ಟು, ತೌಸೀಫ್ ಉಳ್ಳಾಲ, ರಫೀಕ್ ಕೊಪ್ಪ, ರಝಾಕ್ ಬಾರ್ಯ, ಸಮೀರ್, ಇರ್ಶಾದ್ ನೆಕ್ಕಲಾಡಿ, ಹನೀಫ್ ಮೂಳೂರು, ಸಿದ್ದೀಕ್ , ಅಶ್ರಫ್ ಕಿನ್ಯ, ಶೇಕಬ್ಬ ಜೋಗಿಬೆಟ್ಟು, ಸರ್ಫಾಝ್ ಮೂಳೂರು, ಇಸ್ಮಾಯಿಲ್ ಕಿನ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News