ದುಬೈ: ರಬ್ಬರ್ ಷೂ ಪ್ರಿಯರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

Update: 2017-03-20 16:26 GMT

ದುಬೈ, ಮಾ. 20 : ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಅಭಿಯಾನದ ಬಳಿಕ ರಬ್ಬರ್ ಷೂ ಗಳನ್ನು ನಿಷೇಧಿಸುವ ಬಗ್ಗೆ ದುಬೈ ಮುನಿಸಿಪಾಲಿಟಿ ನೋಟಿಸ್ ಜಾರಿ ಮಾಡಿದೆ.

ಹೋಟೆಲೊಂದರ ಎಸ್ಕಲೇಟರ್ ನಲ್ಲಿ ಬಾಲಕನೊಬ್ಬನ ಕಾಲು ಸಿಲುಕಿ ಆತ ತನ್ನ ಪಾದವನ್ನು ಕಳಕೊಂಡ ಬಳಿಕ ಈ ಅಭಿಯಾನ ಪ್ರಾರಂಭವಾಗಿತ್ತು. ಆ ಬಾಲಕ ರಬ್ಬರ್ ಷೂ ಧರಿಸಿದ್ದ. ಇದು ಒಂದು ಅಪಘಾತವಾಗಿದ್ದು  ಈಗ ರಬ್ಬರ್ ಷೂ ಗಳನ್ನು ವಾಪಸ್ ಪಡೆಯುವ ಕುರಿತು ಮಾಹಿತಿ ಇಲ್ಲ ಎಂದು ಮುನಿಸಿಪಾಲಿಟಿ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದೆ.

ತನ್ನ ಮಗ ಅಪಘಾತವೊಂದರಲ್ಲಿ ತನ್ನ ಪಾದ ಕಳಕೊಂಡ ಬಳಿಕ ಆತನ ತಾಯಿ ರಬ್ಬರ್ ಷೂ ಗಳ ಅಪಾಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದರು. ಕ್ರಾಕ್ಸ್ ಇಂಕ್ ( ರಬ್ಬರ್ ಷೂ ತಯಾರಿಸುವ ದೊಡ್ಡ ಕಂಪೆನಿ ) ಒಂದು ಜಾಗತಿಕ ಕಂಪೆನಿಯಾಗಿದ್ದು ಅದು ಜಾಗತಿಕ ಮಾರುಕಟ್ಟೆಯಿಂದ ತನ್ನ ಶೂಗಳನ್ನು ಹಿಂಪಡೆಯುವ ಯಾವುದೇ ಮಾಹಿತಿ ಈವರೆಗೆ ಇಲ್ಲ ಎಂದು ಮುನಿಸಿಪಾಲಿಟಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News