ಯುಎಇ : 9 ವರ್ಷದ ಮಗುವಿಗೆ ಕಚ್ಚಿದ ನಾಯಿಯ ಮಾಲಕನಿಗೆ ಶಿಕ್ಷೆ ಮತ್ತು ದಂಡ

Update: 2017-03-21 12:48 GMT

ಅಬುಧಾಬಿ, ಮಾ. 21: ಒಂಬತ್ತು ವರ್ಷ ವಯಸ್ಸಿನ ಮಗುವನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ನಾಯಿಯ ಮಾಲಕನಿಗೆ ಅಬುಧಾಬಿ ಕ್ರಿಮಿನಲ್ ಕೋರ್ಟು, ಆರು ತಿಂಗಳು ಜೈಲು ವಾಸ, ಮತ್ತು 50,000ದಿರ್ಹಂ ದಂಡ ವಿಧಿಸಿದ್ದಾರೆ.

ಅಮೆರಿಕದವನ ಮನೆ ಕೆಲಸದವಳು ಮೂರು ನಾಯಿಗಳನ್ನು ಕರೆದು ಕೊಂಡು ಹೋಗುತ್ತಿದ್ದಾಗ ಅವಳ ಕೈಯಿಂದ ತಪ್ಪಿಸಿದ ಎರಡು ನಾಯಿಗಳು ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚಿಹಾಕಿತ್ತು. ಎಲ್ಲ ಮಕ್ಕಳು ಓಡಿ ಹೋಗಿದ್ದರೂ ಈಜಿಪ್ಟ್‌ನ ಒಂಬತ್ತು ವರ್ಷದ ಬಾಲಕ ನಾಯಿ ದಾಳಿಗೆ ಗುರಿಯಾಗಿದ್ದನು.

ಮನೆಕೆಲಸದವಳ ನಿರ್ಲಕ್ಷ್ಯ ನಾಯಿ ಬಾಲಕನಿಗೆ ಕಚ್ಚಲು ಕಾರಣವೆಂದುಈಹಿಂದೆ ಪ್ರಾಸಿಕ್ಯೂಶನ್ ತನಿಖೆಯಲ್ಲಿ ಸಾಬೀತಾಗಿತ್ತು. ಅಮೆರಿಕದವನು ಬೇರೊಬ್ಬ ಸ್ಪೋನ್ಸರ್‌ನ ಬಳಿಯಿಂದ ತಪ್ಪಿಸಿಕೊಂಡು ಬಂದ ಮಹಿಳೆಯನ್ನು ತನ್ನ ನೆಕೆಲಸಗಾರಳಾಗಿನೇಮಕಗೊಳಿಸಿದ್ದು ತನಿಖೆಯಲಿ ಬಹಿರಂಗವಾಗಿದೆ.

ಜವಾಬ್ದಾರಿರಹಿತ ಕೆಲಸದವಳಲ್ಲಿ ನಾಯಿಯನ್ನು ಕೊಟ್ಟದ್ದಕ್ಕಾಗಿ ಅಮೆರಿಕದವನಿಗೆ ಆರು ತಿಂಗಳು ಜೈಲು, ತಪ್ಪಿಸಿಕೊಂಡ ಮಹಿಳೆಯನ್ನು ಕೆಲಸಕ್ಕೆ ನೇಮಿಸಿದ್ದಕ್ಕೆ 50,000 ದಿರ್ಹಂ ದಂಡವನ್ನು ಕ್ರಿಮಿನಲ್ ಕೋರ್ಟು ವಿಧಿಸಿದೆ. ಇದೇವೇಳೆ ಬಾಲಕನ ಪೋಷಕರು ನಷ್ಟ ಪರಿಹಾರಕ್ಕೆ ಕೇಸು ನೀಡಿದ್ದಾರೆಯೆ ಎಂಬುದು ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News