ಶಾರ್ಜಾ ದಲ್ಲಿ ಕಟ್ಟಡದಿಂದ ಕೆಳಗೆ ಬಿದ್ದು, ಭಾರತದ ವಿದ್ಯಾರ್ಥಿನಿ ಸಾವು

Update: 2017-03-21 12:54 GMT

ಶಾರ್ಜಾ, ಮಾ. 21: ಕೇರಳ ಮೂಲದ ವಿದ್ಯಾರ್ಥಿನಿ ಶಾರ್ಜದ ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಸಾವಿಗೀಡಾದ ವಿದ್ಯಾರ್ಥಿನಿಯನ್ನುಶಾರ್ಜಾ ಇಂಡಿಯನ್ ಸ್ಕೂಲ್‌ನ ಹತ್ತನೆ ತರಗತಿಯಲ್ಲಿ ಕಲಿಯುತ್ತಿರುವ ಅಶ್ವತಿ(16) ಎಂದು ಗುರುತಿಸಲಾಗಿದೆ.

ಅವಳು ಕೇರಳ ತ್ರಿಶೂರ್ ಮಾಳ ಎಂಬಲ್ಲಿನ ಅಜಯ್‌ಕುಮಾರ್, ಶ್ರೀಕಲಾರ ಪುತ್ರಿಯಾಗಿದ್ದಾಳೆ.ಸೋಮವಾರ ಮಧ್ಯಾಹ್ನ 2:30ಕ್ಕೆ ಈ ಘಟನೆ ನಡೆದಿದೆ.

ಶಾರ್ಜಾ ಅಲ್ ಮಜಾಸ್ ಜಿಲ್ಲೆಯ ಜಮಾಲ್ ಅಬ್ದುಲ್ ನಾಸರ್ ಸ್ಟ್ರೀಟ್‌ನಲ್ಲಿ ವಾಸವಿರುವ ಕಟ್ಟಡದ ಏಳನೆ ಮಹಡಿಯಿಂದ ಅಶ್ವತಿ ಕೆಳಗೆ ಬಿದ್ದಿದ್ದಾಳೆ. ಘಟನೆ ನಡೆಯುವಾಗ ಪ್ಲಾಟ್‌ನಲ್ಲಿ ಅಶ್ವತಿಯ ತಂದೆತಾಯಿ ಇದ್ದರು ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ ಕೂಡಲೇ ಪೊಲೀಸರು ಬಂದು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವಿದ್ಯಾರ್ಥಿನಿಯ ಪ್ರಾಣಪಕ್ಷಿ ಘಟನಾಸ್ಥಳದಲ್ಲಿಯೇ ಹಾರಿಹೋಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News