ಅಬುಧಾಬಿ: ವಾಹನ ಚಲಾಯಿಸುವಾಗ ಮೊಬೈಲ್ ಉಪಯೋಗಿಸಿ ಸಿಕ್ಕಿಬಿದ್ದವರು ಎಷ್ಷು ಸಾವಿರ ಮಂದಿ ಗೊತ್ತೇ ?
Update: 2017-03-21 18:32 IST
ಅಬುಧಾಬಿ,ಮಾ. 21: ವಾಹನಚಲಾಯಿಸುತ್ತಿದ್ದಾಗ ಮೊಬೈಲ್‌ಫೋನ್ ಉಪಯೋಗಿಸಿದ 39,334 ಮಂದಿಗೆ ಅಬುಧಾಬಿ ಪೊಲೀಸರು ದಂಡ ವಿಧಿಸಿದ್ದಾರೆ. ರಾಜಧಾನಿಯಲ್ಲಿ ಆಗುವ ಅಪಘಾತಗಳಲ್ಲಿ ಶೇ. 10ರಷ್ಟು ಮೊಬೈಲ್ ಫೋನ್ ಉಪಯೋಗಿಸಿ ವಾಹನ ಚಾಲನೆ ಮಾಡುವುದು ಕಾರಣವಾಗಿದೆ ಎಂದು ಕಂಡು ಬಂದ್ದಿದ್ದು, ಆದ್ದರಿಂದ ಪೊಲೀಸರು ಮೊಬೈಲ್ ಬಳಸಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ತಪಾಸಣೆ ನಡೆಸುತ್ತಿದ್ದಾರೆ.
ಹಲವು ಪ್ರಯಾಣಿಕರು ವಾಹನ ಚಲಾಯಿಸುವಾಗ ಮೊಬೈಲ್ ಉಪಯೋಗಿಸುತ್ತಾರೆ. ಆದರೆ ಇವರಲ್ಲಿ ಯುವಕರ ಸಂಖ್ಯೆ ಹೆಚ್ಚು. ಮೊಬೈಲ್ ಬಳಕೆ ಕೆಟ್ಟ ಅಭ್ಯಾಸವಾಗಿ ಬದಲಾಗಿದೆ, ಸಂಚಾರ ನಿಯಮವನ್ನು ಇಂತಹವರು ಉಲ್ಲಂಘಿಸುತ್ತಿದ್ದಾರೆ ಎಂದು ಸಂಚಾರನಿಯಮ ಉಲ್ಲಂಘನೆ ಪರಿಶೀಲನಾ ವಿಭಾಗದ ಮುಖ್ಯಸ್ಥ ಮೇಜರ್ ಸುಲೈಮಾನ್ ಫರಾಝ್ ಅಲ್ ಖುಬೈಸಿ ಹೇಳಿದ್ದಾರೆ.
ಫೋನ್ ಮಾಡುವುದು, ಮೆಸೇಜ್ ಕಳುಹಿಸಿವುದು ಮಾಡುವಾಗ ಚಾಲಕ ಗಮನಕಳಕೊಳ್ಳುತ್ತಾನೆ. ಇದರಿಂದಾಗಿ ಅಪಘಾತ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.