ಐಟಿ ಕೆಲಸದ ಭರವಸೆ ಕೊಟ್ಟು, 3,500 ಮಂದಿಯಿಂದ 9ಕೋಟಿ ರೂ. ಪಂಗನಾಮ ಹಾಕಿ ದಂಪತಿ ಮಾಯ!

Update: 2017-03-21 13:07 GMT

ಕ್ಯಾಲಿಕಟ್, ಮಾ. 21: ಐಟಿ ಕ್ಷೇತ್ರದಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡಿ ಹಣ ಮಾಡಬಹುದುಎಂದು ಭರವಸೆಕೊಟ್ಟು ಶಿಕ್ಷಣವೇತ್ತ ಗೃಹಿಣಿಯರ ಸಹಿತ ಸಾವಿರಾರು ಜನರಿಂದ ತಲಾ 5,000 ರೂಪಾಯಿಯಂತೆ ಸುಮಾರು 9 ಕೋಟಿ ರೂಪಾಯಿ ಸಂಗ್ರಹಿಸಿದ್ದ ದಂಪತಿ ದಿಢೀರ್ ತಪ್ಪಿಸಿಕೊಂಡಿದ್ದಾರೆ. ಕ್ಯಾಲಿಕಟ್, ಜಸ್ಲಾ ಸೆಂಟರ್ ಕಟ್ಟಡದ ಎರಡನೆ ಮಹಡಿಯಲ್ಲಿರುವ ಐಟಿ ವರ್ಲ್ಡ್‌ನ ಹೆಸರಿನಲ್ಲಿ ಭಾರೀ ಮೋಸ ನಡೆಸಲಾಗಿದೆ.

ಕೂತ್ತುಪರಂಬ್ ಎಂಬಲ್ಲಿನ ಪ್ರವೀಣಾ ಮತ್ತು ಆಕೆಯ ಪತಿ ಐಟಿ ಉದ್ಯೋಗದ ಭರವಸೆ ನೀಡಿ ಅಮಾಯಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದಾರೆ. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಐಟಿವರ್ಲ್ಡ್ ಕಾರ್ಯಾರಂಭಿಸಿತ್ತು. ಕಚೇರಿ ಸೋಮವಾರದಿಂದ ಮುಚ್ಚಿದೆ. ಇಷ್ಟರಲ್ಲೇ 200ಕ್ಕೂ ಹೆಚ್ಚು ಮಂದಿ ಐಟಿ ವರ್ಲ್ಡ್‌ನಿಂದ ನಾವು ಮೋಸವಾಗಿದ್ದೇವೆಂದು ನಡಕ್ಕಾವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಂಚಕ ದಂಪತಿ ಡಾಟ ಎಂಟ್ರಿಕೆಲಸದ ಭರವಸೆ ನೀಡಿದ್ದರು. 950 ಪುಟಗಳ ಪಿಡಿಎಫ್‌ನ್ನು ಪರಿವರ್ತಿಸಿ ವರ್ಡ್‌ನ ವಿಷಯವನ್ನು ಎಡಿಟ್ ಮಾಡುವ ಕೆಲಸ. ಕೆಲಸಕ್ಕೆ 17,000ರೂಪಾಯಿ ಸಂಬಳ, ಎಡಿಟಿಂಗ್‌ ಗೆ 12,000 ರೂ. ಸಂಬಳ ನಿಗದಿಗೊಳಿಸಲಾಗಿತ್ತು.

ಒಂದು ಕೆಲಸ ವಹಿಸಿಕೊಳ್ಳುವುದಕ್ಕಿಂತ ಮೊದಲು ನೂರು ರೂಪಾಯಿ ಎರಡು ಸ್ಟಾಂಪ್ ಪೇಪರ್, ಉದ್ಯೋಗಾರ್ಥಿಗಳು ಸಂಸ್ಥೆಗೆ ಮುಂಗಡ 5000ರೂಪಾಯಿ ನೀಡಬೇಕು. ನಾಲ್ಕು ಕೆಲಸಗಳು ಮುಗಿದರೆ ಸಂಬಳವಲ್ಲದೆ ಈ ಮೊತ್ತವನ್ನು ಕೂಡಾ ಹಿಂದುರಿಗಿಸಲಾಗುವುದು ಎಂದು ದಂಪತಿ ಹಣ ಸಂಗ್ರಹಿಸಿದ್ದರು.

ಈ ಈರೀತಿ ಎರಡ್ಮೂರು ಕೆಲಸಗಳಿಗಾಗಿ 5000 ರೂ ಪಾಯಿಗಳಿಂದ ಲಕ್ಷ ರೂಪಾಯಿ ವರೆಗೆ ಹಣ ನೀಡಿದವರಿದ್ದಾರೆ. ಇವರಲ್ಲಿ ಕೆಲವರು ತಾವು ಮೋಸ ಹೋದೆವು ಎಂದು ಸೋಮವಾರ ಐಟಿ ವರ್ಲ್ಡ್ ವಿರುದ್ಧ ನಡಕ್ಕಾವ್ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News