ಯುಎಇ: ಸರಕಾರದ ಟೀಕೆಗಾಗಿ ಮಾನವಹಕ್ಕು ವಕೀಲನ ಬಂಧನ

Update: 2017-03-21 14:06 GMT

ದುಬೈ, ಮಾ. 21: ಸೈಬರ್‌ಕ್ರೈಮ್ ಅಪರಾಧಗಳಿಗಾಗಿ ಯುಎಇಯ ಖ್ಯಾತ ಮಾನವಹಕ್ಕು ವಕೀಲರೊಬ್ಬರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಸರಕಾರವನ್ನು ಟೀಕಿಸಿದ ಆರೋಪ ಅವರ ಮೇಲಿದೆ.

ವಕೀಲ ಅಹ್ಮದ್ ಮನ್ಸೂರ್ ಬಂಧನಕ್ಕಾಗಿ ಸೈಬರ್‌ಕ್ರೈಮ್‌ಗಳ ಪಬ್ಲಿಕ್ ಪ್ರಾಸಿಕ್ಯೂಶನ್ ಕಚೇರಿ ಆದೇಶ ಹೊರಡಿಸಿತ್ತು ಎಂದು ಸರಕಾರಿ ಸುದ್ದಿ ಸಂಸ್ಥೆ ಡಬ್ಲುಎಎಂ ಮಂಗಳವಾರ ವರದಿ ಮಾಡಿದೆ.

ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಯುಎಇಗೆ ಅವಮಾನಗೈದ, ದೇಶದ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಕಟಿಸಿ ಹೊರದೇಶಗಳಲ್ಲಿ ಅದರ ಪ್ರತಿಷ್ಠೆಗೆ ಕುಂದುಂಟು ಮಾಡಿದ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ ಎಂದು ದುಬೈಯ ‘ಗಲ್ಫ್ ನ್ಯೂಸ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News