ಸೌದಿ: ಮೊಬೈಲ್ ಕ್ಷೇತ್ರದ ಸ್ವದೇಶೀಕರಣದಲ್ಲಿ ವಿನಾಯಿತಿ

Update: 2017-03-22 11:57 GMT

ರಿಯಾದ್, ಮಾ. 22: ನಿತಾಕತ್‌ನ ಪ್ರಯುಕ್ತ ಮೊಬೈಲ್ ಫೋನ್ ಮಾರಾಟ ಕ್ಷೇತ್ರದಲ್ಲಿ ನಡೆಸಲಾದ ಸ್ವದೇಶೀಕರಣದಲ್ಲಿ ಸ್ವಲ್ಪಪ್ರಮಾಣದ ವಿನಾಯಿತಿಗೆ ಸೌದಿ ಅರೇಬಿಯ ಕಾರ್ಮಿಕ ಸಚಿವಾಲಯ ನಿರ್ಧರಿಸಿದೆ. ಅದು ಮೊಬೈಲ್ ಅಂಗಡಿಗಳ ಸ್ವದೇಶೀಕರಣದ ಪ್ರಮಾಣವನ್ನು ಶೇ. 94ಕ್ಕೆ ಇಳಿಸಲಿದೆ.

ಖಾಸಗಿ ಕ್ಷೇತ್ರದಲ್ಲಿ ಊರ್ಜಿತದಲ್ಲಿರುವ ನಿತಾಕತ್ ವ್ಯವಸ್ಥೆಯಲ್ಲಿಲ್ಲಿ ಸೆಪ್ಟಂಬರ್ ಮೂರರಿಂದ ಹೊಸ ನೀತಿ ಜಾರಿಗೆ ಬರಲಿದೆ. ಕೆಲವು ಕ್ಷೇತ್ರದ ಸ್ವದೇಶೀಕರಣ ಮರು ನಿರ್ಣಯಕ್ಕೆ ಸಚಿವಾಲಯ ಚಿಂತನೆ ನಡೆಸಿದೆ. ಸಂಪೂರ್ಣ ಸ್ವದೇಶೀಕರಣ ಜಾರಿಗೆ ತಂದ ಬಳಿಕ ಈಗ ವಿನಾಯಿತಿ ನೀಡಲಾಗುತ್ತಿದೆ. ಹೊಸ ತೀರ್ಮಾನ ಬೃಹತ್ ಕಂಪೆನಿಗಳಿಗೆ ಉಪಯುಕ್ತವೆನಿಸಲಿದೆ. ಸಣ್ಣ ಕಂಪೆನಿಗಳಿಗೆ ಇದರಿಂದ ಪ್ರಯೋಜನ ಇಲ್ಲ ಎನ್ನಲಾಗಿದೆ. ಮೊಬೈಲ್ ಅಂಗಡಿ ಸ್ವದೇಶೀಕರಣದಿಂದ ಸಾವಿರಾರು ಭಾರತೀಯರು ಕೆಲಸ ಕಳೆದುಕೊಂಡಿದ್ದರು. ಅದೇ ವೇಳೆ ಗ್ಯಾಸ್, ಆರ್ಥಿಕ ಸಂಸ್ಥೆಗಳಲ್ಲಿ ಶೇ.90ರಷ್ಟು ಸ್ವದೇಶೀಕರಣ ಕಡ್ಡಾಯಗೊಳಿಸಲಾಗುವುದು. ಗುತ್ತಿಗೆ ಆಧಾರದ ಉದ್ಯೋಗದಲ್ಲಿ ಶೇ. 15ರಷ್ಟು ಸ್ವದೇಶಿಗಳಿದ್ದರೆ ಸಾಕಾಗುತ್ತದೆ ಎಂದು ಕಾರ್ಮಿಕ ಸಚಿವ ಡಾ. ಅಲಿ ಅಲ್‌ಗಫೀಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News