ಉಮ್ರಾಕ್ಕೆ ತೆರಳಿದ ಭಾರತದ ಮಹಿಳೆ ಮಕ್ಕದಲ್ಲಿ ನಿಧನ
Update: 2017-03-22 17:47 IST
ಮಕ್ಕ, ಮಾ. 22: ಉಮ್ರಾ ನಿರ್ವಹಿಸಲು ತೆರಳಿದ ಲಕ್ಷದ್ವೀಪದ ಖಮರ್ ಬಾನು(58) ಎನ್ನುವ ಮಹಿಳೆ ಮಕ್ಕದಲ್ಲಿ ನಿಧನರಾಗಿದ್ದಾರೆ. ತನ್ನ ಪುತ್ರ ಸಲೀಂ ಜೊತೆಗೆ ಉಮ್ರಾ ನಿರ್ವಹಿಸಲು ಅವರು ಮಕ್ಕಕ್ಕೆ ಬಂದಿದ್ದರು. ಅವರ ಪತಿ ಕೊಯಮ್ಮಕೋಯ ನಾಲ್ಕುವರ್ಷದ ಹಿಂದೆ ಹಜ್ ನಿರ್ವಹಿಸುವ ವೇಳೆ ಮಕ್ಕದಲ್ಲಿನಿಧನರಾಗಿದ್ದರು.
ಮಕ್ಕದ ಜನ್ನತ್ತುಲ್ ಮುಅಲ್ಲದಲ್ಲಿ ಮೃತದೇಹದ ದಫನಕಾರ್ಯ ನಡೆಸಲಾಗಿದೆ.