ಯುಎಇಯಲ್ಲಿ ಭಾರೀಮಳೆ

Update: 2017-03-22 12:22 GMT

ಅಬುಧಾಬಿ,ಮಾ. 22: ಮಂಗಳವಾರ ಯುಎಇಯ ವಿವಿಧ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಶಾರ್ಜ, ರಾಸಲ್‌ಖೈಮ, ಅಬುಧಾಬಿ, ಫುಜೈರ ಎಮಿರೇಟ್‌ಗಳಲ್ಲಿ ತೀವ್ರಮಳೆಯಾಗಿದ್ದು, ಅಬುಧಾಬಿಯಲ್ಲಿ ಬೆಳಗ್ಗೆ ನಾಲ್ಕುಗಂಟೆಯಿಂದ ಬೆಳಗ್ಗೆ ಒಂಬತ್ತು ಗಂಟೆವರೆಗೂ ಮಳೆ ಸುರಿದಿದೆ. ಮಳೆಯಿಂದಾಗಿ ಶೇಖ್ ಝಾಯಿದ್ ರಸ್ತೆಯ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಲ್ಲಲ್ಲಿ ವಾಹನಅಪಘಾತಗಳಾಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

  ಶೇಖ್ ಝಾಯಿದ್ ರಸ್ತೆಯ ಮೂಲಕ ಅಬುಧಾಬಿಗೆ ತೆರಳುವ ದಾರಿಯಲ್ಲಿ ಗರ್ಹೂದ್ ಸೇತುವೆ ಬಳಿ ಅಪಘಾತವೊಂದು ನಡೆದಿತ್ತು. ಇದರಿಂದಾಗಿ ಬಹಳ ಹೊತ್ತು ದಾರಿಯಲ್ಲಿ ವಾಹನ ಸಂಚಾರ ನಿಂತು ಹೋಗಿತ್ತು. ಅಲ್ ಐನ್ ಮತ್ತು ಪರಿಸರ ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ ಆರಂಭವಾದ ಮಳೆ ಮತ್ತು ಮರಳು ಗಾಳಿ ರಾತ್ರಿ ಹನ್ನೆರಡು ಗಂಟೆವರೆಗೂ ಮುಂದುವರಿದಿತ್ತು. ವಿವಿಧ ಸ್ಥಳಗಳಲ್ಲಿ ನೀರು ಕಟ್ಟಿನಿಂತಿದೆ. ಮರಗಳು ಬಿದ್ದಿವೆ. ನಗರಸಭೆ ನೌಕರರು ನೀರು ಮತ್ತು ಮರಗಳನ್ನು ರಸ್ತೆಯಿಂದ ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ.

ದುಬೈಯಲ್ಲಿ ಕೂಡಾ ಭಾರಿ ಮಳೆಯಾಗಿದ್ದು. 160ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದೆ. ದುಬೈ ಪೊಲೀಸರು ವಾಹನ ಸವಾರರಿಗೆ ಕಂಟ್ರೋಲ್ ರೂಮ್ ಮೂಲಕ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರಿಗೆ 1423 ತುರ್ತು ಕರೆಗಳುಸಹಾ ಬಂದಿವೆ ಎಂದು ಕಂಟ್ರೋಲ್ ಯುನಿಟ್ ನಿರ್ದೇಶಕ ಕರ್ನಲ್ ಆರಿಫ್ ಅಲ್ ಶಂಶಿ ಹೇಳಿದ್ದಾರೆ. ರಸ್ತೆಯು ಒದ್ದೆಯಾಗಿರುವುದರಿಂದ ವಾಹನಗಳನ್ನು ನಿಧಾನವಾಗಿ ಚಲಾಯಿಸಬೇಕೆಂದು ಅವರು ವಾಹನ ಚಾಲಕರಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News