ಡಿಕೆಎಸ್‌ಸಿ ನೂತನ ಅಲ್ ನಹದ ಶಾರ್ಜಾ ಯುನಿಟ್ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಹಾಜಿ.ಜೈನುದ್ದೀನ್ ಬೆಳ್ಳಾರೆ ಆಯ್ಕೆ
ಶಾರ್ಜಾ, ಮಾ.23: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ ರಾಷ್ಟೀಯ ಸಮಿತಿ ಅದೀನದಲ್ಲಿ ಹಾಜಿ.ಜೈನುದ್ದೀನ್ ಬೆಳ್ಳಾರೆ ರವರ ನಿವಾಸದಲ್ಲಿ ರಾಷ್ಟೀಯ ಸಮಿತಿ ಗೌರಾವಾಧ್ಯಕ್ಷ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ನೇತೃತ್ವದಲ್ಲಿ ಅಸ್ಮಾಹುಲ್ ಉಸ್ನಾ ದಿಕ್ರ್ ಮಜ್ಲಿಸ್ ನೊಂದಿಗೆ ನಡೆಯಿತು.
ಡಿಕೆಎಸ್‌ಸಿ ಯುಎಇ ರಾಷ್ಟೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್, ಡಿಕೆಎಸ್‌ಸಿ ಬಗ್ಗೆ ಮಾಹಿತಿಯನ್ನು ನೀಡುವುದರೊಂದಿಗೆ ನೂತನ ಅಲ್ ನಹದ ಯುನಿಟ್ ಅನ್ನು ರಚಿಸಿದರು.
ನೂತನ ಸಮಿತಿಯನ್ನು ಸಯ್ಯದ್ ತ್ವಾಹ ಭಾಪಕಿ ತಂಘಳ್ ಉದ್ಘಾಟಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಜ್ಮಾನ್ ಯುನಿಟ್ ಗೌರಾವಾಧ್ಯಕ್ಷ ಅಬೂಬಕ್ಕರ್ ಮದನಿ ಕೆಮ್ಮಾರ ರವರು ನೂತನ ಸಮಿತಿಗೆ ಶುಭಹಾರೈಸಿದರು.
ಯುನಿಟ್ ಅಧ್ಯಕ್ಷರಾಗಿ ಆಯ್ಕೆಯಾದ ಹಾಜಿ.ಜೈನುದ್ದೀನ್ ಬೆಳ್ಳಾರೆ ಮಾತನಾಡುತ್ತ, ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವುದಾಗಿ ತಿಳಿಸುತ್ತಾ ಎಲ್ಲರ ಸಹಕಾರವನ್ನು ಕೋರಿದರು.
ಸಭೆಯಲ್ಲಿ ರಾಷ್ಟೀಯ ಸಮಿತಿಯ ಇ.ಕೆ.ಇಬ್ರಾಹಿಂ ಕಿನ್ಯ, ಜನಾಬ್.ಬದ್ರುದ್ದೀನ್ ಅರಂತೋಡು, ಕಮಲ್ ಅಜ್ಜಾವರ ಹಾಗು ಇನ್ನಿತರರು ಉಪಸ್ಥಿತರಿದ್ದು ಬಿ.ಟಿ.ಅಶ್ರಫ್ ಲತೀಫಿ ತೆಕ್ಕಾರ್ ಧನ್ಯವಾದ ಸಮರ್ಪಿಸಿದರು.
2017 - 18 ಸಾಲಿನ ನೂತನ ಸಮಿತಿ:
ಅಧ್ಯಕ್ಷ : ಹಾಜಿ.ಜೈನುದ್ದೀನ್ ಬೆಳ್ಳಾರೆ, ಉಪಾಧ್ಯಕ್ಷ: ಅಬ್ದುಲ್ ರಜಾಕ್ ಜಾಲ್ಸುರು, ಪ್ರಧಾನ ಕಾರ್ಯದರ್ಶಿ: ರಝಬ್ ಮುಹಮ್ಮದ್ ಉಚ್ಚಿಲ, ಜಂಟಿ ಕಾರ್ಯದರ್ಶಿ: ಅಬ್ದುಲ್ ರಹಿಮಾನ್ ಮೂಳೂರು, ಕೋಶಾಧಿಕಾರಿ: ಬಿ.ಟಿ.ಅಶ್ರಫ್ ಲತೀಫಿ ತೆಕ್ಕಾರ್, ಸಂಚಾಲಕ: ಇಸ್ಮಾಯಿಲ್ ಬಶ್ರಾ , ಇಸ್ಮಾಯಿಲ್ ಕಣ್ಣೂರ್, ರಹೀಮ್ ಕೋಡಿ , ಷರೀಫ್ ಮದನಿ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.