ಬಹ್ರೈನ್: ಭಯೋತ್ಪಾದನೆ ಆರೋಪದಲ್ಲಿ ಮೂವರಿಗೆ ಗಲ್ಲು
Update: 2017-03-24 20:53 IST
ಮನಾಮ, ಮಾ. 24: ಭಯೋತ್ಪಾದನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಬಹ್ರೈನ್‌ನ ನ್ಯಾಯಾಲಯವೊಂದು ಮೂವರಿಗೆ ಗುರುವಾರ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹೈ ಕ್ರಿಮಿನಲ್ ನ್ಯಾಯಾಲಯವು ಇದೇ ಪ್ರಕರಣಕ್ಕೆ ಸಂಬಂಧಿಸಿ 14 ಮಂದಿಗೆ 10 ವರ್ಷದಿಂದ ಜೀವಾವಧಿ ಜೈಲಿನವರೆಗೆ ವಿವಿಧ ಅವಧಿಯ ಜೈಲು ಶಿಕ್ಷೆಗಳನ್ನು ವಿಧಿಸಿತು.
2014ರಲ್ಲಿ ಬಾಂಬ್ ದಾಳಿಗಳನ್ನು ನಡೆಸಿದ ಆರೋಪಗಳನ್ನು ಅವರು ಎದುರಿಸುತ್ತಿದ್ದರು. ದಾಳಿಯಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದರು.