×
Ad

ಸೌದಿಯಲ್ಲಿ ಕಾನೂನು ಉಲ್ಲಂಘಿಸುವವರ ಪತ್ತೆಗೆ 20 ಸರಕಾರಿ ಸಂಸ್ಥೆಗಳು !

Update: 2017-03-26 16:58 IST

ರಿಯಾದ್, ಮಾ. 26: ಸೌದಿ ಅರೇಬಿಯದ ಗೃಹ ಸಚಿವಾಲಯ ಘೋಷಿಸಿರುವ “ಕಾನೂನು ಉಲ್ಲಂಘಿಕರಿಲ್ಲದ ದೇಶ” ಎನ್ನುವ ಅಭಿಯಾನದಲ್ಲಿ ಅನಧಿಕೃತ ವಾಸವಿರುವವರನ್ನು ಪತ್ತೆಹಚ್ಚಲಿಕ್ಕಾಗಿ ಸರಕಾರದ 20 ಸಂಸ್ಥೆಗಳು ತಪಾಸಣೆ ನಡೆಸಲಿವೆ ಎಂದು ಪಾಸ್‌ಪೋರ್ಟ್ ವಿಭಾಗ(ಜವಾಸತ್) ಹೇಳಿದೆ. ಮಾರ್ಚ್ 29ರಿಂದ ಆರಂಭವಾಗುವ 90 ದಿವಸಗಳ ವಿನಾಯಿತಿ ದಿನಗಳಲ್ಲಿ ಮತ್ತು ಅದರ ನಂತರವೂ ಕಠಿಣ ತಪಾಸಣೆ ನಡೆಸಲಾಗುವುದು ಎಂದು ಜವಾಸತ್ ಮುಖ್ಯಸ್ಥ ತಲಾಲ್ ಆಶ್ಶಲ್‌ಹುಬ್ ಹೇಳಿದ್ದಾರೆ. ಸ್ಥಳೀಯ ಚ್ಯಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮತಾಡುತ್ತಿದ್ದರು. ಸಿರಿಯ,ಯಮನ್ ಮುಂತಾದ ಸಮಸ್ಯೆ ಪೀಡಿತ ದೇಶಗಳ ನಿರಾಶ್ರಿತರನ್ನು ಸಾರ್ವಜನಿಕ ಕ್ಷಮೆಯ ಅವಧಿಯಲ್ಲಿ ದೇಶದಿಂದ ಗಡಿಪಾರು ಮಾಡುವುದಿಲ್ಲ. ಇಂತಹವರಿಗೂ ವಿಸಿಟ್ ವೀಸಾ ಮತ್ತುಇಖಾಮ ನವೀಕರಣಮಾಡಬೇಕೆಂದು ಮೇಲಿನ ಆದೇಶವಿದೆ ಎಂದು ಜವಾಸತ್ ಮುಖ್ಯಸ್ಥ ತಲಾಲ್ ಅಶ್ಶಲ್‌ಹುಬ್ ಹೇಳಿದ್ದಾರೆ.

ಉಳಿದೆಲ್ಲ ರಾಷ್ಟ್ರದ ಪ್ರಜೆಗಳಿಗೆ ಸಾರ್ವಜನಿಕ ಕ್ಷಮೆ 90 ದಿವಸಗಳ ನಂತರ ಯಾವುದೇ ರೀತಿಯ ವಿನಾಯತಿ ಇರುವುದಿಲ್ಲ. ವಿನಾಯಿತಿ ಕಾಲದ ಅವಕಾಶವನ್ನು ಸದುಪಯೋಗಪಡಿಸಲು ಉದಾಸೀನ ತೋರಿಸಿದವರಿಗೆ ವಿನಾಯತಿ ಅವಧಿ ಮುಗಿದ ಮೇಲೆ ಹಿಡಿದು ಶಿಕ್ಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News