ಮುಲ್ಕಿ: ಕೆರೆಕಾಡು ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ
ಮುಲ್ಕಿ, ಮಾ.26: ಇಲ್ಲಿಗೆ ಸಮೀಪದ ಬೆಳ್ಳಾಯರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆಕಾಡು ಪ್ರದೇಶದ ನಿವಾಸಿ ಪ್ರಾನ್ಸಿಸ್ ಮತ್ತು ದುಲ್‌ಸಿನ್ ಲೋಬೊ ದಂಪತಿಯ ಕಿರಿಯ ಪುತ್ರ ಜೀವನ್ ಲೋಬೊ(28) ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಶುಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಜೀವನ್, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶನಿವಾರ ಬೆಳಗ್ಗೆ ಪಕ್ಷಿಕೆರೆ ಮೂಲದ ಅವರ ಸಹೊದ್ಯೋಗಿಯೊಬ್ಬರು ಪಕ್ಷಿಕೆರೆ ಚರ್ಚ್‌ಗೆ ದೂರವಾಣಿಯ ಮೂಲಕ ಮಾಹಿತಿ ನೀಡಿದ್ದರು.
ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಫ್ಲಾಂಟೆಕ್ ಎಂಬ ಶಡ್ಡೌನ್ ಕಂಪೆನಿಯೊಂದರಲ್ಲಿ ಕಳೆದ ಹಲವು ಷರ್ವಗಳಿಂದ ಕಾರ್ಯನಿರ್ವಹಿಸುತ್ತಿದ್ದ ಜೀವನ್, ಕಳೆದ ಜನವರಿಯಲ್ಲಿ ರಜೆಯ ನಿಮಿತ್ತ ಊರಿಗೆ ಬಂದ್ದು, ಫೆಬ್ರವರಿಯಲ್ಲಿ ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಪ್ರಾನ್ಸಿಸ್ ಮತ್ತು ದುಲ್‌ಸಿನ್ ಲೋಬೋ ದಂಪತಿಯ ಮೂವರು ಮಕ್ಕಳಲ್ಲಿ ಜೇಸನ್ ಹಿರಿಯವನಾದರೆ, ಕಿರಿಯವನಾಗಿದ್ದ ಜೇವನ್, ಕಳೆದ ಹಲವು ವರ್ಷಗಳಿಂದ ಸೌದಿ ಅರೆಬಿಯಾದಲ್ಲಿ ದುಡಿದು ತನ್ನ ಕುಟುಂಬಕ್ಕೆ ಆಸರೆಯಾಗಿದ್ದರು.
ಪಾರ್ಥಿವ ಶರೀರವನ್ನು ಊರಿಗೆ ತರುವ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಭಾರತಕ್ಕೆ ತರುವ ನಿಟ್ಟಿನಲ್ಲಿ ರಾಯಭಾರಿ ಕಚೇರಿಯ ಎಲ್ಲಾ ದಾಖಲೆಗಳು ಸಿದ್ಧಗೊಂಡಿದೆ. ಸೌದಿ ಅರೆಬಿಯಾದ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕಾಯಲಾಗುತ್ತಿದೆ. ಸುಮಾರು 4-5 ದಿನಗಳ ಒಳಗಾಗಿ ಪಾರ್ಥೀವ ಶರೀರ ಭಾರತ ತಲುಪಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.