ಕೆಸಿಎಫ್ ದವಾಸಿರ್ ಯುನಿಟ್‌ನಿಂದ ಸಂಘಟನಾ ತರಬೇತಿ ಶಿಬಿರ
ದಮ್ಮಾಮ್, ಮಾ.27: ಕೆಸಿಎಫ್ ದವಾಸಿರ್ ಯುನಿಟ್‌ನಿಂದ ಕೆಸಿಎಫ್ ಕಾರ್ಯಕರ್ತರಿಗೆ ‘ಉತ್ತಮ ನಾಯಕನು ಆಗುವುದು ಹೇಗೆ’ ಎಂಬ ವಿಷಯದಲ್ಲಿ ರವಿವಾರ ಸಂಘಟನಾ ತರಬೇತಿ ಶಿಬಿರ ಆಯೋಜಿಸಲಾಗಿತ್ತು.
ದಮ್ಮಾಮ್ ಸಅದಿಯಾ ಹಾಲಿನಲ್ಲಿ ಕೆಸಿಎಫ್ ದಮ್ಮಾಮ್ ಸೆಕ್ಟರ್ ಅಧ್ಯಕ್ಷ ಹಬೀಬ್ ಸಖಾಫಿ ದುಆದೊಂದಿಗೆ ಆರಂಭವಾಯಿತು. ಕೆಸಿಎಫ್ ರಾಷ್ಟ್ರೀಯ ನೇತಾರ ಮತ್ತು ದಮ್ಮಾಮ್ ರೆನ್ ಸಂಘಟನಾ ವಿಭಾಗ ಅಧ್ಯಕ್ಷ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ ಶಿಬಿರವನ್ನು ಉದ್ಘಾಟಿಸಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಕೆಸಿಎಫ್ ಐಎನ್‌ಸಿ ಉಪಾಧ್ಯಕ್ಷ ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿಯವರನ್ನು ಕೆಸಿಎಫ್ ಸೌದಿ ಅರೇಬಿಯಾ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ಹಬೀಬ್ ಸಖಾಫಿ, ಕೆಸಿಎಫ ದವಾಸಿರ್ ಯುನಿಟ್ ಅಧ್ಯಕ್ಷ ಅಬ್ದುಲ್ ಖಾದರ್ ಝೈನಿ ಸನ್ಮಾನಿಸಿದರು. ದಮ್ಮಾಮ್ ಸೆಕ್ಟರ್ ಮಟ್ಟದಲ್ಲಿ ಅತೀ ಹೆಚ್ಚು ಇಶಾರ ಅಭಿಯಾನ ಮಾಡಿರುವ ಬಾಶಾ ಗಂಗಾವಳಿಯವರನ್ನು ಈ ಸಂದರ್ಭ ಝೈನಿ ಉಸ್ತಾದ್ ಸನ್ಮಾನಿಸಿದರು. ಅಶ್ರಫ್ ಮದನಿ ನಗರ ಅಶ್ರಫ್‌ರನ್ನು ಅಭಿನಂದಿಸಲಾಯಿತು.
ಫಾರೂಕ್ ಕಾಟಿಪಳ್ಳ, ಕೆಸಿಎಫ್ ದವಾಸಿರ್ ಯುನಿಟ್ ಅಧ್ಯಕ್ಷ ಅಬ್ದುಲ್ ಖಾದರ್ ಝೈನಿ ಅಧ್ಯಕ್ಷ ಭಾಷಣ ಮಾಡಿದರು.
ಇಕ್ಬಾಲ್ ಕೈರಂಗಳ ಈ ಕಾರ್ಯಕ್ರಮ ನಿರೂಪಿಸಿದರು. ಆಸಿಫ್ ಪುತ್ತೂರು ವಂದಿಸಿದರು. ಕೆಸಿಎಫ್ ದವಾಸಿರ್ ಯುನಿಟ್ ಪ್ರಧಾನ ಕಾರ್ಯದರ್ಶಿ ಆಸಿಫ್ ಪುತ್ತೂರು ಸ್ವಾಗತಿಸಿದರು.