×
Ad

ಸೌದಿಅರೇಬಿಯ: ಅನಧಿಕೃತ ವಲಸಿಗರ ನೆರವಿಗೆ ಜಿದ್ದಾದಲ್ಲಿ ದೂತವಾಸದ 11 ಹೆಲ್ಪ್ ಡೆಸ್ಕ್‌ಗಳು

Update: 2017-03-27 16:21 IST

ಜಿದ್ದಾ, ಮಾರ್ಚ್, 27:ಸಾರ್ವಜನಿಕ ಕ್ಷಮೆಯ ಕಾಲಾವಧಿಯಲ್ಲಿ ಜಿದ್ದಾ ವಲಯದಲ್ಲಿ ಭಾರತೀಯರಿಗಾಗಿ ಹನ್ನೊಂದು ಹೆಲ್ಪ್‌ಡೆಸ್ಕ್‌ಗಳು ಕಾರ್ಯನಿರ್ವಹಿಸಲಿದೆ ಎಂದು ಕಾನ್ಸುಲೇಟ್ ಜನರಲ್ ಮುಹಮ್ಮದ್ ನೂರ್ ರಹ್ಮಾನ್ ಶೇಖ್ ಹೇಳಿದ್ದಾರೆ. ಸೌದಿಯಲ್ಲಿಅನಧಿಕೃತ ವಾಸವಿರುವ ಭಾರತೀಯರು ಊರಿಗೆ ತೆರಳಲು ದೂತವಾಸದ ಈ ಹೆಲ್ಪ್ ಡೆಸ್ಕ್‌ಗಳಿಂದ ಸಹಾಯ ಪಡೆಯಬಹುದೆಂದು ಅವರು ತಿಳಿಸಿದ್ದಾರೆ. ಭಾರತದ ದೂತವಾಸದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ಲಭ್ಯಗೊಳಿಸಲಾಗುವುದು. ತಬೂಕ್, ಯಾಂಬು, ಮದೀನ, ಮಕ್ಕ, ತಾಯಿಫ್, ಖುನ್‌ಫುದ, ಅಲ್‌ಬಾಹ, ಬಿಷ, ಅಬಹ, ಜಿಸಾನ್, ನಜ್ರಾನ್ ಮುಂತಾದೆಡೆ ಹೆಲ್ಪ್‌ಡೆಸ್ಕ್‌ಗಳು ಕಾರ್ಯವೆಸಗಲಿವೆ.

 ಊರಿಗೆ ಹೋಗುವವರಿಗೆ,ಎಮರ್ಜೆನ್ಸಿ ಸರ್ಟಿಫಿಕೇಟ್ ಫಾರಂ ವಿತರಣೆ, ಅದನ್ನು ಮರು ಸಂಗ್ರಹಿಸುವುದು ಮುಂತಾದ ಕೆಲಸಗಳನ್ನು ಹೆಲ್ಪ್ ಡೆಸ್ಕ್‌ಗಳು ಮಾಡಲಿವೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಜನರಿಗೆ ಮಾಧ್ಯಮಗಳ ಮೂಲಕ ತಿಳಿಸಲಾಗುವುದು. ಅರ್ಜಿದಾರರಿಗೆ ಫೋನ್‌ಮೂಲಕ ನೋಂದಾಯಿಸುವ ಅಪ್ಲಿಕೇಶನ್ ಕಾನ್ಸುಲೇಟ್ ತಯಾರಿಸಲಿದೆ.

ಜಿದ್ದಾದ ಭಾರತದ ರಾಯಭಾರ ಕಚೇರಿ ಸಾರ್ವಜನಿಕ ಕ್ಷಮೆಗೆ ಸಂಬಂಧಿಸಿದ ವಿಷಯಗಳ ಚರ್ಚೆ ನಡೆಸಲು ಕರೆದ ಸಾಮಾಜಿಕ ಸಂಘಟನೆಗಳು ಮತ್ತು ಕಾನ್ಸುಲೇಟ್ ಸ್ವಯಂಸೇವಕರ ಸಭೆಯಲ್ಲಿ ಕಾನ್ಸುಲೇಟ್ ಜನರಲ್ ಮಾತಾಡುತ್ತಿದ್ದರು. ಊರಿಗೆಮರಳಿಚ್ಛಿಸುವ ಭಾರತೀಯರಿಗೆ ಎಲ್ಲ ರೀತಿಯ ಸಹಾಯವನ್ನು ನೀಡಲಾಗುವುದು ಮತ್ತುಎಲ್ಲ ಅನಧಿಕೃತ ವಾಸವಿರುವಭಾರತೀಯರು ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದು ಅವರು ಹೇಳಿದರು.

ಸ್ವಯಂಸೇವಕರು 2013ರ ತಮ್ಮ ಅನುಭವಗಳನ್ನು ಸಭೆಯಲ್ಲಿ ವಿವರಿಸಿದರು. ದೂರದ ಗ್ರಾಮೀಣ ಪ್ರದೇಶಗಳಿಂದ ಜಿದ್ದಾಕ್ಕೆ ಬರುವವರಿಗೆ ಉಳಿದುಕೊಳ್ಳುವ ವ್ಯವಸ್ಥೆ, ಆಹಾರ ಇತ್ಯಾದಿ ಸೌಕರ್ಯಗಳನ್ನು ಒದಗಿಸಬೇಕು. ಚಾರ್ಟೆಡ್ ವಿಮಾನ ಮಾಡಿಅದರಲ್ಲಿ ಜನರನ್ನುಊರಿಗೆ ಕಳುಹಿಸಿಕೊಡಬೇಕೆಂದು ಸ್ವಯಂಸೇವಕರು ವಿನಂತಿಸಿದರು.

ಕಾನ್ಸುಲರ್ ಆನಂದಕುಮಾರ್, ಡಾ.ನೂರುಲ್ ಹಸನ್, ಡಾ. ಇರ್ಷಾದ್ ಅಹ್ಮದ್, ಮೊಯಿನ್ ಅಖ್ತರ್ ಮುಂತಾದವರು ಸಭೆಯಲ್ಲಿ ಮಾತಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News