ಕೆ.ಸಿ.ಎಫ್ ಉನೈಝ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ
ರಿಯಾದ್, ಮಾ.28: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ಅಧೀನದಲ್ಲಿರುವ ಕೆ.ಸಿ.ಎಫ್ ಉನೈಝ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಶಾಫಿ ಮದನಿ ವಲವೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಉದ್ಘಾಟನೆಯನ್ನು ಮಾಟೂರು ತಂಙಳ್ ರವರು ನೆರವೇರಿಸಿದರು.
ರಿಯಾದ್ ಝೋನಲ್ ನೇತಾರ ಎ.ಕೆ.ನವಾಝ್ ಸಖಾಫಿ ಅಡ್ಯಾರ್ ಪದವು "ಜೀವನ ನಾಡಿಗಾಗಿ , ನಾಳೆಗಾಗಿ ಎಂಬ ವಿಷಯದ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು.
2015-16 ನೇ ಸಾಲಿನ ವರದಿ ಹಾಗು ಲೆಕ್ಕ ಪತ್ರವನ್ನು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಿದಾಯತ್ ತೀರ್ಥಹಳ್ಳಿ ಮಂಡಿಸಿದರು. ಸದ್ರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚನೆಯ ನೇತೃತ್ವವನ್ನು ರಿಯಾದ್ ಝೋನಲ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ ವಹಿಸಿದ್ದರು. ರಿಯಾದ್ ಬದಿಯ ಸೆಕ್ಟರ್ ಕಾರ್ಯದರ್ಶಿ ಅಬ್ದುಲ್ ಮಜೀದ್ ವಿಟ್ಲ ಹಾಗೂ. ಐಸಿಎಫ್ ದಾಹಿ ಶಮೀರ್ ಸಖಾಫಿ ನೂತನ ಸಮಿತಿಗೆ ಶುಭ ಹಾರೈಸಿದರು.
ಮೊದಲಿಗೆ ಅಜ್ಮಲ್ ಮುಹ್ಸಿನ್ ಕಿರಾಅತ್ ಪಠಿಸಿದರು. ಹಿದಾಯತ್ ತೀರ್ಥಹಳ್ಳಿ ಸ್ವಾಗತಿಸಿದರು . ನೆಬಿ ಕೀರ್ತನೆ ಮುಹಮ್ಮದ್ ಮುನಾಝ್ ಅಲಾಪಿಸಿ ನವಾಝ್ ಅಡ್ಯಾರ್ ಧನ್ಯವಾದ ಮಾಡಿದರು.
2017-19ನೆ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಮುಸ್ತಫಾ ಸುಳ್ಯ, ಪ್ರ. ಕಾರ್ಯದರ್ಶಿಯಾಗಿ ಹಿದಾಯತ್ ತೀರ್ಥಹಳ್ಳಿ, ಕೋಶಾಧಿಕಾರಿಯಾಗಿ ಹಸನ್ ಕೆಸಿರೋಡ್, ಸಂಘಟನಾಧ್ಯಕ್ಷರಾಗಿ ಹೈದರ್ ಇನೋಳಿ, ಸಂಘಟನಾ ಕಾರ್ಯದರ್ಶಿಯಾಗಿ ಹನೀಫ್.ಪಿ.ವೈ, ತಿಳುವಳಿಕಾಧ್ಯಕ್ಷರಾಗಿ ಶಾಫಿ ಮದನಿ ವಳವೂರ್, ತಿಳುವಳಿಕಾ ಕಾರ್ಯದರ್ಶಿಯಾಗಿ ಇಕ್ಬಾಲ್ ಪಾನೇಲ, ಆಡಳಿತ ಅಧ್ಯಕ್ಷರಾಗಿ ನವಾಝ್ ಅಡ್ಯಾರ್, ಆಡಳಿತ ಕಾರ್ಯದರ್ಶಿಯಾಗಿ ನೌಶಾದ್ ತೋಡಾರ್, ವೆಲ್ಫೇರ್ ಪ್ರೆಸಿಡೆಂಟ್ ಆಗಿ ಅಲಿಫ್, ವೆಲ್ಫೇರ್ ಸೆಕ್ರೆಟರಿಯಾಗಿ ನಿಸಾರ್ ತೋಡಾರ್, ಪಬ್ಲಿಕೇಶನ್ ಪ್ರೆಸಿಡೆಂಟ್ ಆಗಿ ಅಶ್ರಫ್ ಮೂಡಬಿದ್ರೆ, ಪ್ರಚಾರ ಕಾರ್ಯದರ್ಶಿಯಾಗಿ ಆಗಿ ಅಬೂಬಕರ್ ಕಡೇಶಿವಾಲ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಸ್ಮಾನ್ ಕೋಟೆಬಾಗಿಲು, ಅಬೂಬಕ್ಕರ್ ಕೆದಂಬಾಡಿ, ಶರೀಫ್ ತೋಡಾರ್, ಅಬ್ದುಲ್ ಕಾದರ್ ಉಪ್ಪಿನಂಗಡಿ, ಬದ್ರುದ್ದೀನ್ ಉಲ್ಲಾಲ, ಮುಹಿಯ್ಯುದ್ದೀನ್ ಶಿವಮೊಗ್ಗ, ಅಬೂಬಕರ್ ದೇರಳಕಟ್ಟೆ, ನಝೀರ್ ಮೊಂಟೆಪದವು, ಆದಂ ತೋಡಾರ್, ಇರ್ಫಾನ್ ಮುರ, ಇಮ್ರಾನ್ ಮಾರಿಪಳ್ಳ, ಯೂಸುಫ್ ಪಾನೇಲ ಆಯ್ಕೆಯಾದರು.