ಯುಎಇ: ಪ್ರಮುಖ ಬ್ರಾಂಡ್‌ಗಳ 10 ಲಕ್ಷ ನಕಲಿ ಉತ್ಪನ್ನಗಳ ವಶ

Update: 2017-03-28 10:29 GMT

ದುಬೈ,ಮಾ. 28: ಪ್ರಮುಖ ಬ್ರಾಂಡ್‌ಗಳ ನಕಲಿ ಉತ್ಪನ್ನಗಳನ್ನುನಿರ್ಮಿಸಿ ವಿತರಿಸಲು ಸಿದ್ಧಪಡಿಸಿಟ್ಟಿರುವ ಗೋಡೌನ್‌ಗಳಿಗೆ ದುಬೈ ಹಣಕಾಸುಅಭಿವೃದ್ಧಿ ಇಲಾಖೆಯ(ಡಿ ಇಡಿ) ಮಿಂಚಿನ ದಾಳಿ ನಡೆಸಿ ತಪಾಸಣೆ ನಡೆಸಿದ್ದು, 30 ಲಕ್ಷ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ. ಫೋನ್, ಪ್ಯಾಂಟ್, ಬ್ಯಾಗ್ ಕಾಂಟಾಕ್ಟ್ ಲೆನ್ಸ್‌ಗಳು, ವಾಚ್‌ಗಳು ಪ್ರಿಂಟರ್ ಸೌಂದರ್ಯವರ್ಧಕ ವಸ್ತುಗಳು ಹೀಗೆ ನಾನಾ ತರದ ಪ್ರಮುಖ ಬ್ರಾಂಡ್‌ಗಳ ನಕಲಿ ವಸ್ತುಗಳನ್ನುಡಿಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ರಹಸ್ಯ ಮಾಹಿತಿ ದೊರಕಿದ ಹಿನ್ನೆಲೆಯಲಿ ಡಿಇಡಿ ಕಾರ್ಯಾಚರಣೆ ನಡೆಸಿತ್ತು. 48 ಗಂಟೆಗಳ ತಪಾಸಣೆಯ ನಂತರ ಸಿಕ್ಕಿದ ವಸ್ತುಗಳೆಲ್ಲವನ್ನೂ ನಾಶಪಡಿಸಲಾಗಿದೆ. ತನಿಖೆಗೆ ಇನ್ನೂ ಹದಿನಾಲ್ಕು ದಿವಸ ಅಗತ್ಯವಿದೆ ಎಂದು ಪೇಟೆಂಟ್ ವಿಭಾಗದ ನಿರ್ದೇಶಕ ಇಬ್ರಾಹೀಂ ಬೆಹ್ಝಾದ್ ಹೇಳಿದ್ದಾರೆ.

 ಟ್ರೇಡ್ ಮಾರ್ಕ್ ಇತ್ಯಾದಿಗಳನ್ನು ಉಪಯೋಗಿಸಿ ಜಾಗತಿಕ ಬ್ರಾಂಡ್‌ಗಳ ನಕಲಿ ಉತ್ಪನ್ನಗಳು ಗೋಡೌನ್‌ಗಳಲ್ಲಿಪತ್ತೆಯಾಗಿವೆ. ಸುಲಭದಲ್ಲಿ ಪತ್ತೆಹಚ್ಚಲು ಸಾಧ್ಯವಾಗದಂತಹ ಸ್ಥಳದಲ್ಲಿ ಗೋಡೌನ್‌ಗಳಲ್ಲಿ ಇದನ್ನು ಅಡಗಿಸಿಡಲಾಗಿತ್ತು. ಇಂತಹ ನಕಲಿ ವಸ್ತುಗಳನ್ನು ವಿವಿಧ ಕಡೆಗಳಿಂದ ತರಿಸಿ ಅಲ್ಲಿ ಸಂಗ್ರಹಿಸಡಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News