ದಮಾಮ್: ವಿದ್ಯುತ್ ಅವಘಡ, ಭಾರತೀಯನ ಸಾವು

Update: 2017-03-28 10:08 GMT

ದಮಾಮ್, ಮಾ. 28: ಸೌದಿ ಅರೇಬಿಯದ ಅಬ್‌ಖೈಖ್ ಫದಲಿಯದಲ್ಲಿ ಕೇರಳದ ವ್ಯಕ್ತಿಯೊಬ್ಬರು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ. ಮೃತರನ್ನು ಕೊಲ್ಲಂ ಜಿಲ್ಲೆಯ ಅಂಞಲ್ ಪನಂಪಟ್ಟದ ಜೇಮ್ಸ್ ಜಾನ್(55) ಎಂದು ಗುರುತಿಸಲಾಗಿದೆ. ಇವರು ಆರಾಮ್ಕೊದ ಸೈಟ್‌ನಲ್ಲಿ ಮಿನಿಸೂಪರ್ ಮಾರ್ಕೆಟ್ ನಡೆಸುತ್ತಿದ್ದರು.

ರವಿವಾರ ಅವರು ಅಂಗಡಿ ಮುಚ್ಚಿ ಮನೆಗೆ ತೆರಳುವ ವೇಳೆ ಅಂಗಡಿಗೆ ತಾಗಿದ್ದ ಮೈನ್‌ಸ್ವಿಚ್ ಆಫ್ ಮಾಡುತ್ತಿದ್ದಾಗ ಶಾಕ್ ಹೊಡೆದು ಮೃತಪಟ್ಟಿದ್ದಾರೆ. ಮೃತದೇಹವನ್ನು ಅಗತ್ಯ ವಿಧಿವಿಧಾನಗಳನ್ನು ಪೂರ್ತಿಗೊಳಿಸಿದ ಬಳಿಕ ಊರಿಗೆ ಕೊಂಡೊಯ್ಯಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News