ಕೆಸಿಎಫ್ ರೌದಾ ಸೆಕ್ಟರ್ ವಾರ್ಷಿಕ ಮಹಾಸಭೆ

Update: 2017-03-28 12:48 GMT

ರಿಯಾದ್, ಮಾ.28: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಅಧೀನದಲ್ಲಿರುವ ಕೆಸಿಎಫ್ ರೌದಾ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಮಾರ್ಚ್.23ರಂದು ರೌದಾದಲ್ಲಿ ರಾತ್ರಿ ನಡೆಯಿತು.

ಸಭೆಯ ಉದ್ಘಾಟನೆಯನ್ನು ರಝಾಕ್ ಮದನಿ, ಮದನಿ ನಗರ ನೆರವೇರಿಸಿದರು, ಸೆಕ್ಟರ್ ಎಜುಕೇಶನ್ ವಿಂಗ್ ಇದರ ಅಧ್ಯಕ್ಷ ಇಕ್ಬಾಲ್ ಸ'ಅದಿ ಕಾಟಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೆಸಿಎಫ್ ರಿಯಾದ್ ಝೋನಲ್ ಪಬ್ಲಿಕೇಶನ್ ವಿಂಗ್ ಕಾರ್ಯದರ್ಶಿ ಮುಸ್ತಫ ಸ'ಅದಿ ಸೂರಿಕುಮೇರು "ಜೀವನ ನಾಡಿಗಾಗಿ,ನಾಳೆಗಾಗಿ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. 2015-2017ರ ವಾರ್ಷಿಕ ವರದಿಯನ್ನು ಸೆಕ್ಟರ್ ಪ್ರ.ಕಾರ್ಯದರ್ಶಿ ರಿಯಾಝ್ ಮಲಾರ್ ಹಾಗೂ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಅಬ್ದುಲ್ ಮಜೀದ್ ಹಳೆಯಂಗಡಿ ಮಂಡಿಸಿದರು.

ಸದ್ರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚನೆಯನ್ನು ರಿಯಾದ್ ಝೋನಲ್ ಚುನಾವಣಾ ಅಧೀಕ್ಷಕರಾಗಿ ಬಂದ ನವಾಝ್ ಚಿಕ್ಕಮಂಗಳೂರು ವಹಿಸಿದ್ದರು. ಕೆಸಿಎಫ್ ಮಲಾಝ್ ಝೋನಲ್ ಪ್ರ.ಕಾರ್ಯದರ್ಶಿ ಝಹೀರ್ ಅಬ್ಬಾಸ್ ಉಳ್ಳಾಲ ಹಾಗೂ ಬಶೀರ್ ಮೆದು ಆಶಂಸೆ ಭಾಷಣ ಮಾಡಿದರು. ವೇದಿಕೆಯಲ್ಲಿ ಮಜ್ಲಿಸ್ ಆದೂರು ಇದರ ಆರ್ಗನೈಸರ್ ಖಾಲಿದ್ ಅಲ್ ಮಝಾಯಿರ್ ಉಪಸ್ಥಿತರಿದ್ದರು, ಪ್ರ.ಕಾರ್ಯದರ್ಶಿ ರಿಯಾಝ್ ಮಲಾರ್ ಮೊದಲಿಗೆ ಸ್ವಾಗತಿಸಿದರು.

ಕೆ.ಸಿ.ಎಫ್ ರೌದಾ ಸೆಕ್ಟರ್ ರಿಯಾದ್ 2017- 2018 ರ ಸಾಲಿನ ಪದಾಧಿಕಾರಿಗಳು:

ಅಧ್ಯಕ್ಷ: ಅಬ್ದುಲ್ ಸಲಾಮ್ ಹಳೆಯಂಗಡಿ, ಪ್ರಧಾನ ಕಾರ್ಯದರ್ಶಿ: ರಿಯಾಝ್ ಮಲಾರ್, ಕೋಶಾಧಿಕಾರಿ: ಅಬ್ದುಲ್ ಮಜೀದ್ ಹಳೆಯಂಗಡಿ

ಶಿಕ್ಷಣ ವಿಭಾಗ: 

ಅಧ್ಯಕ್ಷ: ಇಕ್ಬಾಲ್ ಸ'ಅದಿ ಕಾಟಿಪಳ್ಳ, ಕಾರ್ಯದರ್ಶಿ: ಫಾರೂಕ್ ಇನೋಳಿ,

ಕಛೇರಿ ವಿಭಾಗ: 

ಅಧ್ಯಕ್ಷ: ಉಬೈದುಲ್ಲಾ ಫರೀದ್ ನಗರ, ಕಾರ್ಯದರ್ಶಿ: ನಾಸಿರುದ್ದೀನ್ ನಂದಾವರ,

ಸಾಂತ್ವನ ವಿಭಾಗ:

ಅಧ್ಯಕ್ಷ: ನಝೀರ್ ಮುಸ್ಲಿಯಾರ್ ನಂದಾವರ, ಕಾರ್ಯದರ್ಶಿ: ಸಾಹಿಲ್ ಮುಳೂರ್

ಪಬ್ಲಿಕೇಷನ್ ವಿಭಾಗ:

ಅಧ್ಯಕ್ಷ : ಸಲೀಮ್ ಅಡ್ಯಾರ್ ಕಣ್ಣೂರ್ ,ಕಾರ್ಯದರ್ಶಿ:  ಸಿದ್ದಿಕ್ ಬೋಳಿಯಾರ್

ಸಂಘಟನೆ ವಿಭಾಗ:

ಅಧ್ಯಕ್ಷ:  ಬದ್ರುದ್ದೀನ್ ದೊಂಪ, ಕಾರ್ಯದರ್ಶಿ:- ಶಿಹಾಬುದ್ದೀನ್ ಹಳೆಯಂಗಡಿ.

ಕಾರ್ಯಕಾರಿ ಸಮಿತೀಯ ಸದಸ್ಯರು: ನೌಶಾದ್ ಬಿ.ಸಿ.ರೋಡ್, ಮುಷ್ತಾಕ್ ಮುಕ್ಕ, ರಝಾಕ್ ಮದನಿ, ಮದನಿ ನಗರ, ಅಶ್ರಫ್ ಡಿ.ಕೆ, ಅಶ್ರಫ್ ನಂದಾವರ, ಫಾಝಿಲ್ ಇನೋಳಿ, ಸಿದ್ದಿಕ್ ಕೊಡಗು, ಅಬ್ದುಲ್ ರಹ್ಮಾನ್ ಮಠ, ಬದ್ರುದ್ದೀನ್ ನ್ಯೂಪಡ್ಪು, ಅಶ್ರಫ್ ನ್ಯೂಪಡ್ಪು,  ರಿಝ್ವಾನ್ ಮದನಿ ನಗರ, ಸಿರಾಜ್ ಬೋಳಿಯಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News