ಕೆಸಿಎಫ್ ಬತ್ತಾ ಸೆಕ್ಟರ್ ವಾರ್ಷಿಕ ಮಹಾಸಭೆ

Update: 2017-03-28 12:58 GMT

ರಿಯಾದ್, ಮಾ.28: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ಅಧೀನದಲ್ಲಿರುವ ಕೆಸಿಎಫ್ ಬತ್ತಾ ಸೆಕ್ಟರ್ ವಾರ್ಷಿಕ ಮಹಾಸಭೆ ಮಾರ್ಚ್ .24ರಂದು ನಡೆಯಿತು.

ಮುಹ್ಯುದ್ದೀನ್ ಝುಹ್ರಿ ಕಿರಾಅತ್ ಪಠಿಸಿದರು. ಹಬೀಬುಲ್ಲಾ ತೆಕ್ಕಾರ್ ಸ್ವಾಗತಿಸಿದರು. ಸಭೆಯ ಉದ್ಘಾಟನೆಯನ್ನು ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ. ಯೂಸುಫ್ ಸಖಾಫಿ ಬೈತಾರ್ ನೆರವೇರಿಸಿದರು. ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಲತೀಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೆಸಿಎಫ್ ರಿಯಾದ್ ಝೋನಲ್ ಸಂಘಟನಾ ಅಧ್ಯಕ್ದ ಸಿದ್ದೀಕ್ ಸಖಾಫಿ ಪೆರುವಾಯಿ "ಜೀವನ ನಾಡಿಗಾಗಿ, ನಾಳೆಗಾಗಿ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕೆಳೆದ ವರ್ಷದ ವರದಿಯನ್ನು ಸೆಕ್ಟರ್ ಕಾರ್ಯದರ್ಶಿ ಬಶೀರ್ ತಲಪಾಡಿ ಹಾಗೂ ಲೆಕ್ಕ ಪತ್ರವನ್ನು ಅಶ್ರಫ್ ಕಿಲ್ಲೂರು ಮಂಡಿಸಿದರು.

ಸದ್ರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚನೆಯನ್ನು ರಿಯಾದ್ ಝೋನಲ್ ಚುನಾವಣಾ ಅಧೀಕ್ಷಕರಾಗಿ ಬಂದ ಹನೀಫ್ ಬೆಳ್ಳಾರೆ ವಹಿಸಿದ್ದರು. ಹಾಗೂ ಕೆಸಿಎಫ್ ರಿಯಾದ್ ಝೋನಲ್ ಅಧ್ಯಕ್ಷ ನಝೀರ್ ಕಾಶಿಪಟ್ಣ ಮತ್ತು ರಿಯಾದ್ ಝೋನಲ್ ಸಂಘಟನಾ ಕಾರ್ಯದರ್ಶಿ ಇಸ್ಮಾಹಿಲ್ ಜೋಗಿಬೆಟ್ಟು ಹೊಸ ಸಮಿತಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ರಿಯಾದ್ ಝೋನಲ್ ಪ್ರ.ಕಾರ್ಯದರ್ಶಿ ಫಾರೂಕ್ ಅಬ್ಬಾಸ್ ಉಳ್ಳಾಲ, ಬದಿಯ್ಯ ಸೆಕ್ಟರ್ ಅಧ್ಯಕ್ಷ ಉಮರ್ ಅಳಕೆಮಜಲು ಹಾಗೂ ಫಾರೂಕ್ ಬಡಕಬೈಲು ಉಪಸ್ಥಿತರಿದ್ದರು.

ಹೈದರ್ ಮರ್ದಾಳ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಹ್ಮಾನ್ ಜೋಗಿಬೆಟ್ಟು ವಂದಿಸಿದರು.

2017-19 ನೂತನ ಸಮಿತಿಯ ವಿವರ:

ಅಧ್ಯಕ್ಷ: ಇಲ್ಯಾಸ್ ಲತೀಫಿ, ಪ್ರಧಾನ ಕಾರ್ಯದರ್ಶಿ: ಅಶ್ರಫ್ ಕಿಲ್ಲೂರು, ಕೋಶಾಧಿಕಾರಿ: ಅಲ್ತಾಫ್ ಸೂರಿಂಜೆ

ಶಿಕ್ಷಣ ವಿಭಾಗ:

ಅಧ್ಯಕ್ಷ: ನವಾಝ್ ಸಖಾಫಿ, ಕಾರ್ಯದರ್ಶಿ: ಅಶ್ರಫ್ ಕೆಎಮ್ಮೆಸ್

ಕಛೇರಿ ವಿಭಾಗ

ಅಧ್ಯಕ್ಷ: ಹಬೀಬುಲ್ಲಾ ತೆಕ್ಕಾರ್, ಕಾರ್ಯದರ್ಶಿ: ಹೈದರ್ ಮರ್ದಾಳ

ಸಾಂತ್ವನ ವಿಭಾಗ:

ಅಧ್ಯಕ್ಷ: ಹನೀಫ್ ಕಣ್ಣೂರು, ಕಾರ್ಯದರ್ಶಿ: ಮಸೂದ್ ವೇಣೂರು

ಪಬ್ಲಿಕೇಷನ್ ವಿಭಾಗ:

ಅಧ್ಯಕ್ಷ: ರಝಾಕ್ ನಾಟೆಕಲ್, ಕಾರ್ಯದರ್ಶಿ: ಅಬ್ದುಲ್ ರಹ್ಮಾನ್ ಜೋಗಿಬೆಟ್ಟು

ಸಂಘಟನಾ ವಿಭಾಗ:

ಅಧ್ಯಕ್ಷ: ರಶೀದ್ ಮದನಿ ಮಾಣಿ, ಕಾರ್ಯದರ್ಶಿ: ಕೆ.ಪಿ. ಅಬ್ದುಲ್ಲಾ

ಸದಸ್ಯರು: ನಝೀರ್ ಕಾಶಿಪಟ್ಣ, ಯೂಸುಫ್ ಸಖಾಫಿ ಬೈತಾರ್, ಬಶೀರ್ ತಲಪಾಡಿ, ಫಾರೂಕ್ ಬಡಕಬೈಲ್, ಜುನೈದ್ ಮುಕ್ಕ, ಮುಸ್ತಫಾ ಸಅದಿ, ಹಂಝ ಮೈಂದಾಳ, ಅಬ್ದುಲ್ಲ ಮದನಿ, ಅಬ್ದುಲ್ ರಹ್ಮಾನ್ ಗಂಟಲ್ಕಟ್ಟೆ, ಸಿದ್ದೀಕ್ ನಿಝಾಮಿ, ಅನ್ಸಾರ್ ಕೈಕಂಬ, ಅಬ್ದುಲ್ ರಹ್ಮಾನ್ ವಿಟ್ಲ, ರಫೀಕ್ ಅಮ್ಜದಿ, ಶರೀಫ್ ಮದನಿ, ಜಮಾಲ್ ಕಾಜೂರು, ಝೈನ್ ಸಖಾಫಿ, ಹುಸೈನ್ ಕೃಷ್ಣಾಪುರ, ಹನೀಫ್ ಪಡ್ಡಂದಡ್ಕ, ರಿಝ್ವಾನ್ ದೇರ್ಲಕಟ್ಟೆ, ಸಿದ್ದೀಕ್ ಮಂಜನಾಡಿ, ಸಿದ್ದೀಕ್ ಸಖಾಫಿ ಪೆರುವಾಯಿ, ಅಬ್ದುಲ್ಲ ಸಖಾಫಿ ಮನ್ಶರ್, ಸಮೀರ್ ಜೆಪ್ಪು     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News