ಮಹಿಳೆಗೆ ವಿದ್ಯಾಭ್ಯಾಸ ನೀಡಿದರೆ ಇಡೀ ಕುಟುಂಬಕ್ಕೆ ವಿದ್ಯಾಭ್ಯಾಸ ನೀಡಿದಂತೆ: ಡಾ.ಬಿ. ಅಹಮದ್ ಹಾಜಿ ಮೊಯುದ್ದೀನ್ ತುಂಬೆ
ದುಬೈ, ಮಾ.28: ಸಮಾಜ ಸೇವಕ, ಅಂತಾರಾಷ್ಟ್ರೀಯ ಹೆಸರುವಾಸಿ ಉದ್ಯಮಿ ಡಾ.ಬಿ. ಅಹಮದ್ ಹಾಜಿ ಮೊಯುದ್ದೀನ್ ತುಂಬೆ ಅವರನ್ನು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ಯು.ಎ.ಇ ವತಿಯಿಂದ ಅಜ್ಮಾನ್ ಮೊಯುದ್ದೀನ್ ವುಡ್ ವರ್ಕ್ಸ್ ನ ಸಭಾಂಗಣದಲ್ಲಿ ಸ್ಮರಣಿಕೆ ನೀಡಿ ಸಾಲು ಹೊದಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ ಹಾಗೂ ಅಲ್ ಇಹ್ಸಾನ್ ವಿದ್ಯಾ ಸಮುಚ್ಛಯದ ಕಿರು ಡಾಕಿಮೆಂಟ್ರಿಯನ್ನು ವೀಕ್ಷಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ. ಅಹಮದ್ ಹಾಜಿ, ಮಹಿಳೆಗೆ ವಿದ್ಯೆ ಕಲಿಸಿದರೆ ಇಡೀ ಕುಟುಂಬಕ್ಕೆ ವಿದ್ಯಾಭ್ಯಾಸ ನೀಡಿದಂತೆ ಎಂಬ ಮಾತಿನೊಂದಿಗೆ ತಾವು ತಮ್ಮ ಯೋಜನೆಯಲ್ಲಿ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಬಿ. ಅಹಮದ್ ಹಾಜಿ ಮೊಯುದ್ದೀನ್ ರವರ ಪುತ್ರ ಅಜ್ಮಾನ್ ಮೊಯುದ್ದೀನ್ ವುಡ್ ವರ್ಕ್ಸ್ ಇದರ ಮೆನೇಜಿಂಗ್ ಡೈರೆಕ್ಟರ್ ಬಿ.ಎಂ.ಅಶ್ರಫ್ ತುಂಬೆ ರವರು ಅತಿಥಿಗಳಾಗಿ ಭಾಗವಹಿಸಿದರು.
ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಅಧ್ಯಕ್ಷ ಹಾಜಿ.ಇಕ್ಬಾಲ್ ಕಣ್ಣಂಗಾರ್ ಸ್ವಾಗತಿಸಿದರು. ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಪ್ರದಾನ ಕಾರ್ಯದರ್ಶಿ ಹಾಜಿ.ಇಸ್ಮಾಯಿಲ್ ಕಿನ್ಯ (ಸೌದಿ ಅರೇಬಿಯಾ) ರವರು ಡಿ.ಕೆ.ಎಸ್.ಸಿ ಹಾಗೂ ಅದರ ಅದೀನದಲ್ಲಿ ಕಾರ್ಯಚರಿಸುತ್ತಿರುವ ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ನ ಬಗ್ಗೆ ವಿವರಿಸಿದರು.
ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಚೆಯರ್ಮೆನ್ ಹಾಜಿ.ಎಂ.ಇ.ಮೂಳೂರು ಪ್ರಾರಂಭವಾಗಲಿರುವ ಅಲ್ ಇಹ್ಸಾನ್ ಮಹಿಳಾ ಕಾಲೇಜುಗೆ ಕೆಲವೊಂದು ಅಗತ್ಯದ ಬಗ್ಗೆ ಸಭೆಯಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಉಪಾಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ, ಹಾಜಿ. ಅಬ್ದುಲ್ಲಾ ಬೀಜಾಡಿ, ಸಲಹೆಗಾರ ಹಾಜಿ.ಹಸನಬ್ಬ ಕೊಳ್ನಾಡು, ಸೆಂಟ್ರಲ್ ಕಮಿಟಿ ಸದಸ್ಯ ಹಾಜಿ.ಜಮಾಲ್ ಕಣ್ಣಂಗಾರ್, ಇ.ಕೆ.ಇಬ್ರಾಹಿಂ ಕಿನ್ಯ, ದೇರಾ ಯುನಿಟ್ ಕೋಶಾಧಿಕಾರಿ ಶಕೂರು ಮಣಿಲ, ಅಲ್ ಗ್ವಿಸಸ್ ಯುನಿಟ್ ಅಧ್ಯಕ್ಷರಾದ ಬದ್ರುದ್ದೀನ್ ಅರಂತೋಡು, ಮೂಸಾ ಹಾಜಿ ಕಿನ್ಯ ಹಾಗೂ ಅಜ್ಮಾನ್ ಯುನಿಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ರವರು ಅತಿಥಿ ಪರಿಚಯದೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.