ಒಮನ್: ಬ್ರೆಝಿಲ್‌ನಿಂದ ಬರುವ ಮಾಂಸಕ್ಕೆ ನಿರ್ಬಂಧ

Update: 2017-03-29 12:29 GMT

ಮಸ್ಕತ್, ಮಾ. 29: ಬ್ರೆಝಿಲ್‌ನಲ್ಲಿ ತರಿಸಲಾಗುತ್ತಿರುವ ಮಾಂಸಕ್ಕೆ ಕಠಿಣ ನಿಯಂತ್ರಣವನ್ನು ಹೇರಲಾಗಿದೆ ಎಂದು ಕೃಷಿ, ಮೀನುಗಾರಿಕೆ ಸಚಿವಾಲಯ ತಿಳಿಸಿದೆ. ಅಸಹಜವಾದ ಉತ್ಪಾದನ ಪ್ರಕ್ರಿಯೆಗಾಗಿ ಬ್ರೆಝಿಲ್ ಅಧಿಕಾರಿಗಳೇ ತಮ್ಮದೇಶದ 21 ಕಂಪೆನಿಗಳಿಗೆ ನಿಷೇಧ ಹೇರಿದ ಹಿನ್ನೆಲೆಯುಲ್ಲಿ ಒಮನ್ ಸರಕಾರ ಈಕ್ರಮಕ್ಕೆಮುಂದಾಗಿದೆ.

 ಆಹಾರ ಸುರಕ್ಷೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಬ್ರೆಝಿಲ್‌ನಿಂದ ಮಾಂಸ ತರಿಸಿಕೊಳ್ಳುವುದಕ್ಕೆ ನೀಡುವ ಲೈಸನ್ಸ್‌ನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಮಾಂಸ ಫ್ಯಾಕ್ಟರಿಗಳ ತಪಾಸಣೆಗೆ ಸಂಬಂಧಿಸಿದ ವಿವರಗಳು ಲಭ್ಯಗೊಳಿಸಲಿಕ್ಕಾಗಿ ಬ್ರೆಝಿಲ್ ಸರಕಾರದೊಂದಿಗೆ ಚರ್ಚಿಸಲಾಗಿದೆ ಎಂದು ಸಚಿವಾಲಯ ವಕ್ತಾರರು ತಿಳಿಸಿದ್ದಾರೆ. ಯುಎಇ ಕೂಡಾ ಕಳೆದ ದಿವಸ ಬ್ರೆಝಿಲ್‌ನ ಮಾಂಸ , ಆಹಾರಕ್ಕೆ ಬಳಸುವ ಹಕ್ಕಿಗಳನ್ನು ತರಿಸಿಕೊಳ್ಳದಂತೆ ನಿಷೇಧ ಹೇರಿದೆ. ಬ್ರೆಝಿಲ್‌ನ ಆಹಾರೋತ್ಪನ್ನಗಳನ್ನು ಈಹಿಂದೆಯೇ ಯುಎಇ ನಿಷೇಧಿಸಿದೆ.. ಅನಾರೋಗ್ಯಕರವಾದ ರೀತಿಯಲ್ಲಿ ಮಾಂಸೋತ್ಪಾದನೆ ನಡೆಸಲಾಗುತ್ತಿದೆ ಎಂದು ಬ್ರೆಝಿಲ್ ಪೊಲೀಸರೇ ಕಳೆದ ಹದಿನೇಳನೆ ತಾರೀಕಿಗೆ ಬಹಿರಂಗಪಡಿಸಿದ್ದರು. ಬ್ರೆಝಿಲ್ ವಿಶ್ವದಲ್ಲೇ ಮೂರನೆ ಬೃಹತ್ ಮಾಂಸ ರಫ್ತುದಾರ ದೇಶವಾಗಿದೆ. ಕಳೆದ ವರ್ಷ 13.5ಶತಕೋಟಿ ಡಾಲರ್ ಆದಾಯ ಮಾಂಸ ರಫ್ತು ವಿಭಾಗದಲ್ಲಿ ಬ್ರೆಝಿಲ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News