ಕತರ್: ಕಾರ್ಮಿಕರಿಗೆ ಶುಕ್ರವಾರ ಕಡ್ಡಾಯ ವಾರದ ರಜೆ

Update: 2017-03-29 12:33 GMT

ದೋಹ, ಮಾ.29: ದೇಶದಲ್ಲಿ ದುಡಿಯುವ ವರ್ಗಕ್ಕೆ ಶುಕ್ರವಾರ ಕಡ್ಡಾಯವಾಗಿ ವಾರಾಂತ್ಯ ರಜೆ ನೀಡಬೇಕೆಂದು ಕತರ್ ಕಾರ್ಮಿಕ ಸಚಿವಾಲಯ ಉದ್ಯೋಗದ ಮಾಲಕರಿಗೆ ಟ್ವಿಟರ್ ಮೂಲಕ ತಿಳಿಸಿದೆ. ವಿದೇಶಿ ಕಾರ್ಮಿಕರ ಹಕ್ಕುಗಳು, ಹೊಣೆಗಳನ್ನು ತಿಳಿಸುವ ಜಾಗೃತಿಯ ಅಂಗವಾಗಿ ಶುಕ್ರವಾರದ ವಾರಾಂತ್ಯದ ರಜೆ ನೀಡಬೇಕೆಂದು ಕಠಿಣ ನಿಲುವು ತಳೆಯಲಾಗಿದೆ. 

ಸಚಿವಾಲಯ ಹೊಸ ಕಾರ್ಮಿಕ ಕಾನೂನಿನ 75ನೆ ಕಲಂ ಪ್ರಕಾರ ಈ ವ್ಯವಸ್ಥೆಯನ್ನು ಉದ್ಯೋಗ ಮಾಲಕರಿಗೆ ವಿವರಿಸಲಾಗಿದೆ. ಪಾಳಿ ಕೆಲಸಗಾರರ ಹೊರತು ದೇಶದ ಎಲ್ಲ ಕಾರ್ಮಿಕರಿಗೆ ವಾರಾಂತ್ಯದಲ್ಲಿ ಒಂದು ದಿವಸ ಕಡ್ಡಾಯವಾಗಿ ರಜೆ ನೀಡಬೇಕು. ಜೊತೆಗೆ 24 ಗಂಟೆ ನಿರಂತರ ರಜೆ ಮತ್ತು ಅಂದಿನವೇತನ ಕೂಡಾ ನೀಡಬೇಕಾಗಿದೆ. ವಿವಿಧ ಸಂದರ್ಭಗಳಲ್ಲಿ ಕಾರ್ಮಿಕರಿಗೆ ಸಂಪೂರ್ಣ ಸಂಬಳ ಇರುವ ಹತ್ತುದಿವಸಗಳ ರಜೆ ಕೂಡಾ ಇದೆ ಎಂದು ಹೊಸ ಕಾರ್ಮಿಕ ನಿಯಮದಲ್ಲಿದೆ. ಇವುಗಳಲ್ಲಿ ಈದುಲ್ ಫಿತ್ರ್‌ನ ಮೂರುದಿವಸ, ಬಕ್ರೀದ್‌ನ ಮೂರು ದಿವಸ, ರಾಷ್ಟ್ರೀಯ ದಿನಾಚರಣೆ ಒಂದು ದಿವಸ ಉಳಿದ ಮೂರು ದಿವಸಗಳನ್ನು ಕಾರ್ಮಿಕರೆ ಸ್ವಯಂ ಆಯ್ಕೆ ಮಾಡಬಹುದು ಎಂದು ಕತರ್ ಕಾರ್ಮಿಕ ಹೊಸ ಕಾನೂನಲ್ಲಿದೆ ಎಂದು ಸಚಿವಾಲಯದ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News