ನೀರಲ್ಲಿ ಸಂಚರಿಸುವ ಬಸ್ !

Update: 2017-03-29 12:56 GMT

 ಮಸ್ಕತ್,ಮಾ.29: ಅರೇಬಿಯದ ನಾರ್ವೆ ಎಂದು ಕರೆಯಲಾಗುವ ಖಸಾಬ್‌ನ ಪ್ರವಾಸಿ ಕೇಂದ್ರದಲ್ಲಿ ವಾಟರ್‌ಬಸ್ ಅಕರ್ಷಣೆಯ ಕೇಂದ್ರವಾಗಿದೆ. ಗೋಲ್ಡನ್ ಕೋಸ್ಟ್ ಟ್ರಾವಲ್ ಆಂಡ್ ಟೂರಿಸಂ ಕಂಪೆನಿ ಈ ಬಸ್ಸನ್ನು ಯುರೋಪಿನಿಂದ ತರಿಸಿದ್ದು, ಖಸಾಬದಲ್ಲಿ ಈ ತಿಂಗಳಲ್ಲಿ ಸೇವೆ ಆರಂಭಿಸಿದೆ. ನೀರಿನಲ್ಲಿ ಸಂಚರಿಸುವ ಬಸ್ ಪ್ರಯಾಣಿಕರಿಗೆ ಇಷ್ಟವಾಗಿದೆ. ಹಿರಿಯರಿಗೆ ಹತ್ತು ರಿಯಾಲ್, ಮಕ್ಕಳಿಗೆ ಐದು ರಿಯಾಲ್ ತೆತ್ತು ಪ್ರಯಾಣ ಬೆಳೆಸಬಹುದು. ತೊಂಬತ್ತು ನಿಮಿಷಗಳ ಕಾಲ ಇದರಲ್ಲಿ ಪ್ರಯಾಣಿಸಬಹುದು. ನಲ್ವತ್ತೈದು ನಿಮಿಷ ನೀರಲ್ಲಿ ಉಳಿದ ನಲ್ವತ್ತೈದು ನಿಮಿಷ ರಸ್ತೆಯಲ್ಲಿ ಈ ಬಸ್ಸು ಸಂಚರಿಸುತ್ತಿದೆ. ರಸ್ತೆಯಲ್ಲಿ 100 ಕಿ.ಮೀ. ವೇಗದಲ್ಲಿ ಮತ್ತು ನೀರಿನಲ್ಲಿ ಏಳು ನಾಟ್ ವೇಗದಲ್ಲಿ ಬಸ್ ಚಲಿಸುತ್ತಿದೆ. 34 ಮಂದಿ ಪ್ರಯಾಣಿಸುವ ಅವಕಾಶ ಇದೆ.

ಎರಡೂ ವರೆವರ್ಷದ ಸಂಶೋಧನೆಯ ಬಳಿಕ ವಾಟರ್ ಬಸ್ ಪರಿಕಲ್ಪನೆ ನಿಜವಾಗಿದೆ. ಅಂತಾರಾಷ್ಟ್ರೀಯ ಸಮುದ್ರ ಯಾತ್ರೆಯ ಸುರಕ್ಷೆ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಿ ಬಸ್ ಸರ್ವಿಸ್ ನಡೆಸಲಾಗುತ್ತಿದೆ. ಲೈಫ್ ಜಾಕೆಟ್, ಮೆಡಿಕಲ್ ಕಿಟ್ ಇತ್ಯಾದಿ ಬಸ್ ನಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News