ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಕ್ರಿಕೆಟ್ ತಂಡದ ಟೀ-ಶರ್ಟ್ ಅನಾವರಣ

Update: 2017-03-29 14:26 GMT

ದೋಹ, ಮಾ.29: ಕತಾರ್ ಇಂಡಿಯನ್ ಸೋಶಿಯಲ್ ಫೋರಮ್  ಕ್ರಿಕೆಟ್ ತಂಡದ ನೂತನ ಟೀ-ಶರ್ಟ್ ಅನಾವರಣ ಕಾರ್ಯಕ್ರಮವು ದೋಹಾ ವಾನೂ ಇವೆಂಟ್ ಮ್ಯಾನೇಜ್ಮೆಂಟ್ ಗ್ರೂಪ್ ಕಚೇರಿಯಲ್ಲಿ ನಡೆಯಿತು.

ವಾನೂ ಇವೆಂಟ್ ಮ್ಯಾನೇಜ್ಮೆಂಟ್ ಗ್ರೂಪ್, ಗ್ರೀನ್ ಸ್ಟಾರ್ ಗ್ರೂಪ್ ಮತ್ತು ಹನ್ನಾನ್ ಕ್ಲಬ್ ನ ವ್ಯವಸ್ಥಾಪಕ ಖಾದರ್ ರವರು ತಂಡದ ಟೀ-ಶರ್ಟ್ ಅನ್ನು ಅನಾವರಣಗೊಳಿಸಿದರು.

ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಘಟಕದ ಅಧ್ಯಕ್ಷ ನಝೀರ್ ಪಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ  ಕತಾರ್ ಇಂಡಿಯನ್ ಫ್ರಟೆರ್ನಿಟಿ ಫೋರಮ್ ನ ಪ್ರಧಾನ ಕಾರ್ಯದರ್ಶಿ ಸಲೀಂ ರಹ್ಮಾನ್ ಬಂಗಾಡಿ, ಇಂಡಿಯನ್ ಸೋಶಿಯಲ್ ಫೋರಮ್ ಕ್ರಿಕೆಟ್ ತಂಡದ ನಾಯಕ ಆರಿಫ್ ಅಕ್ಕರಂಗಡಿ ಹಾಗೂ ತಂಡದ  ಸದಸ್ಯರು ಉಪಸ್ಥಿತರಿದ್ದರು.

Writer - ವರದಿ: ಖಲಂದರ್ ಜಾಲ್ಸೂರ್

contributor

Editor - ವರದಿ: ಖಲಂದರ್ ಜಾಲ್ಸೂರ್

contributor

Similar News