×
Ad

ಸೌದಿ: ಅಕ್ರಮ ವಲಸಿಗರಿಗೆ ಸಾರ್ವಜನಿಕ ಕ್ಷಮೆ; ಮೊದಲ ದಿವಸ ದೂತವಾಸದಲ್ಲಿ 810 ಮಂದಿ

Update: 2017-03-30 17:36 IST

ರಿಯಾದ್,ಮಾ. 30: ಸೌದಿ ಅರೇಬಿಯ ಸರಕಾರ ನೀಡಿರುವ ಸಾರ್ವಜನಿಕ ಕ್ಷಮೆಯ ಸೌಲಭ್ಯವನ್ನು ಪಡೆಯಲಿಕ್ಕಾಗಿ ಅಲ್ಲಿನ ಪಾಸ್‌ಪೋರ್ಟ್ ವಿಭಾಗ ಎಕ್ಸಿಟ್‌ವೀಸಾ ನೀಡಲು ಬುಧವಾರ ಬೆಳಗ್ಗಿನಿಂದ ಚಾಲನೆ ನೀಡಿದೆ. ಸೌದಿಅರೇಬಿಯದಲ್ಲಿ ಕಾನೂನುಬಾಹಿರವಾಗಿ ವಾಸವಿರುವ ವಿದೇಶಿಯರಿಗೆ ಊರಿಗೆ ತೆರಳುವ ಈ ಸೌಲಭ್ಯವನ್ನು ಅದು ಒದಗಿಸುತ್ತಿದೆ. ನಿನ್ನೆ ಬೆಳಗ್ಗೆಯಿಂದ ಮಲಸದ ಜವಾಸತ್ ಕೇಂದ್ರಕ್ಕೆ ಬಂದು ಹಲವಾರು ಭಾರತೀಯರು ಊರಿಗೆ ಹೋಗಲು ಅಗತ್ಯ ಕ್ರಮಗಳನ್ನು ಪೂರ್ತಿಗೊಳಿಸಿಕೊಂಡಿದ್ದರೆ. ರಿಯಾದ್‌ನ ಭಾರತೀಯ ದೂತವಾಸದಲ್ಲಿಯೂ ಬೆಳಗ್ಗೆ ಎಂಟು ಗಂಟೆಯಿಂದ ತುರ್ತು ದೃಢೀಕರಣ ಅರ್ಜಿ ವಿತರಣೆ ಆರಂಭವಾಗಿತ್ತು.

ಸಾರ್ವಜನಿಕ ಕ್ಷಮೆ ಯ ಮೊದಲ ದಿವಸದಲ್ಲಿ 810 ಮಂದಿ ರಾಯಭಾರ ಕಚೇರಿಗೆ ಬಂದಿದ್ದಾರೆ ಮತ್ತು 615 ಮಂದಿ ತುರ್ತು ದೃಢೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ದೂತವಾಸದ ಪ್ರಥಮ ಕಾರ್ಯದರ್ಶಿ ಅನಿಲ್ ನಾಟಿಯಲ್ ಹೇಳಿದ್ದಾರೆ. ಸಾರ್ವಜನಿಕಕ್ಷಮೆ ಮೊದಲನೆದಿನವೇ ಎಕ್ಸಿಟ್ ಕ್ರಮ ಪೂರ್ತಿಗೊಳಿಸಿ ಸೌದಿಯಿಂದ ಊರಿಗೆ ಹೊರಟು ಹೋದವರೂಇದ್ದಾರೆ ಎಂದು ಅವರು ತಿಳಿಸಿದ್ದಾರೆ. ನಿನ್ನೆ ಬೆಳಗ್ಗಿಂದಲೇ ವಿಮಾನ ನಿಲ್ದಾಣದಲ್ಲಿ ಎಕ್ಸಿಟ್ ಸೌಲಭ್ಯ ಮಾಡಿಕೊಡಲಾಗಿತ್ತು. ರಿಯಾದ್ ಕಿಂಗ್ ಖಾಲಿದ್ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕ ಕ್ಷಮೆ ಸೌಲಭ್ಯ ಪಡೆದು ಊರಿಗೆ ಹೋಗುವವರಿಗೆ ವಿಶೇಷ ಎಮಿಗ್ರೇಷನ್ ಕೌಂಟರ್ ಇತ್ತು.

 ಅರಬಿ, ಇಂಗ್ಲಿಷ್, ಉರ್ದು ಭಾಷೆಯ ಸೂಚನೆಗಳು ವಿಮಾನ ನಿಲ್ದಾಣದಲ್ಲಿತ್ತು. ಟಿಕೆಟ್ ಮತ್ತು ಪ್ರಯಾಣದ ದಾಖಲೆ ಇರುವವರ ಬೆರಳಚ್ಚು ಮತ್ತು ಕಣ್ಣು ಪರೀಕ್ಷೆ ನಡೆಸಿ ಎಕ್ಸಿಟ್ ನೀಡಲಾಗುತ್ತಿತ್ತು. ಭಾರತದ ದೂತವಾಸದಲ್ಲಿ ಬೆಳಗ್ಗೆ ಏಳು ಗಂಟೆವರೆಗೆ ರಾಯಭಾರಿಯವರ ನೇತೃತ್ವದಲ್ಲಿ ಎಲ್ಲ ಅಧಿಕಾರಿಗಳು ಮತ್ತು ಅಧಿಕಾರಿಗಳು ಸೇವೆಗೆ ಬಂದು ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News