×
Ad

ಯುಎಇ: ಸರಕಾರವನ್ನು ಟೀಕಿಸಿದ ವಿದ್ವಾಂಸನಿಗೆ 10 ವರ್ಷ ಜೈಲು

Update: 2017-03-30 20:11 IST

ಬೆರೂತ್ (ಲೆಬನಾನ್), ಮಾ. 30: ಆಡಳಿತಾರೂಢ ವ್ಯಕ್ತಿಗಳನ್ನು ಟೀಕಿಸಿ ಟ್ವೀಟ್ ಮಾಡಿರುವುದಕ್ಕಾಗಿ ಖ್ಯಾತ ಶಿಕ್ಷಣ ತಜ್ಞರೊಬ್ಬರಿಗೆ ಯುನೈಟಡ್ ಅರಬ್ ಎಮಿರೇಟ್ಸ್ (ಯುಎಇ)ನ ನ್ಯಾಯಾಲಯವೊಂದು ಬುಧವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಹೇಳಿದೆ.

ಸರಣಿ ಟ್ವೀಟ್‌ಗಳ ಮೂಲಕ ದೇಶ ಮತ್ತು ಅದರ ಸಂಸ್ಥೆಗಳಿಗೆ ಅಪಕೀರ್ತಿ ತರುವ ಉದ್ದೇಶದಿಂದ ನಾಸಿರ್ ಬಿನ್ ಘಾಯಿತ್ ಅಪಪ್ರಚಾರ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಬೆರೂತ್ ಪ್ರಾದೇಶಿಕ ಕಚೇರಿ ತಿಳಿಸಿದೆ.

ಹಿಂದಿನ ಪ್ರಕರಣವೊಂದರಲ್ಲಿ, ತನಗೆ ನ್ಯಾಯೋಚಿತ ವಿಚಾರಣೆಯನ್ನು ನಿರಾಕರಿಸಲಾಗಿತ್ತು ಎಂಬುದಾಗಿಯೂ ನಾಸಿರ್ ತನ್ನ ಒಂದು ಟ್ವೀಟ್‌ನಲ್ಲಿ ಹೇಳಿದ್ದರು.

ಇದೇ ಆರೋಪಗಳಲ್ಲಿ ಅಹ್ಮದ್ ಮನ್ಸೂರ್ ಎಂಬವರನ್ನು ಎರಡು ವಾರಗಳ ಹಿಂದೆ ಪೊಲೀಸರು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.

ನಾಸಿರ್, ಅಹ್ಮದ್ ಮನ್ಸೂರ್ ಸೇರಿದಂತೆ ಐವರನ್ನು 2011ರ ಎಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. ಬಳಿಕ ಅದೇ ವರ್ಷ ಕೊನೆಯಲ್ಲಿ ಅವರನ್ನು ಅಧ್ಯಕ್ಷೀಯ ಕ್ಷಮಾದಾನದ ಮೂಲಕ ಬಿಡುಗಡೆ ಮಾಡಲಾಗಿತ್ತು.

2011ರಲ್ಲಿ ಬಂಧಿಸಿದ ಬಳಿಕ ತನ್ನನ್ನು ನ್ಯಾಯೋಚಿತ ವಿಚಾರಣೆಗೆ ಗುರಿಪಡಿಸಿರಲಿಲ್ಲ ಎಂಬುದಾಗಿ ಅವರು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಅವರನ್ನು 2015 ಆಗಸ್ಟ್‌ನಲ್ಲಿ ಮರು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News