ಸೌದಿ ಅರೇಬಿಯಾದಲ್ಲಿ ಅಪಘಾತ: ಪುತ್ತೂರಿನ ಮೂವರು ಮೃತ್ಯು
Update: 2017-04-01 00:11 IST
ಪುತ್ತೂರು, ಮಾ.31: ಸೌದಿ ಅರೇಬಿಯಾದ ತಬೂಕ್ ಎಂಬಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಪುತ್ತೂರು ತಾಲೂಕಿನ ಸಾಲ್ಮರದ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಸಾಲ್ಮರ ಕೆರೆಮೂಲೆ ನಿವಾಸಿ ನೆಲ್ಲಿಕಟ್ಟೆ ಅಬ್ದುರ್ರಹ್ಮಾನ್ ಎಂಬವರ ಪುತ್ರ ವಝೀರ್ ಅಹ್ಮದ್(35), ಪುತ್ರಿ ಖಮರುನ್ನೀಸಾ(37) ಹಾಗೂ ವಝೀರ್ ಅಹ್ಮದ್‌ರ ಪುತ್ರ 10 ತಿಂಗಳ ಇಯಾನ್ ಅಬ್ದುರ್ರಹ್ಮಾನ್ ಮೃತಪಟ್ಟಿದ್ದಾರೆ. ಖಮರುನ್ನೀಸಾ ಅವರ ಪತಿ ಅಬ್ದುಲ್ ಜಬ್ಬಾರ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.