ಒಮನ್: ಕಟ್ಟಡ ನಿರ್ಮಾಣ ಕಂಪೆನಿಯಿಂದ 3.85 ಲಕ್ಷ ರಿಯಾಲ್ ಕದ್ದು ಭಾರತೀಯ ಪರಾರಿ

Update: 2017-04-02 07:56 GMT

ಮಸ್ಕತ್, ಎ. 2: ಕಟ್ಟಡ ನಿರ್ಮಾಣ ಕಂಪೆನಿಯ 3.85 ಲಕ್ಷ ರಿಯಾಲ್‌ನ್ನು (6.48ಕೋಟಿ ರೂ.) ಕದ್ದು ಕೇರಳದ ವ್ಯಕ್ತಿಯೊಬ್ಬ ಊರಿಗೆ ಪರಾರಿಯಾಗಿದ್ದಾನೆ. ಈ ಕುರಿತುಕಂಪೆನಿ ದೂರು ನೀಡಿದೆ. ಕಂಪೆನಿಯ ಅಕೌಂಟೆಂಟ್ ಹರಿಕುಮಾರ್ ಪಂಗನಾಮ ಹಾಕಿದ ವ್ಯಕ್ತಿ. ಇನ್‌ವಾಯ್ಸಿನಲ್ಲಿ ಕಂಪೆನಿಯ ಅಕೌಂಟ್ ನಂಬರ್ ಬದಲು ತನ್ನ ಅಕೌಂಟ್ ನಂಬರ್ ಬರೆದು ಈತ ಬೃಹತ್ ವಂಚನೆ ನಡೆಸಿದ್ದಾನೆ.

  ಕಂಪೆನಿ ಮಸ್ಕತ್‌ನಲ್ಲಿ ಗುತ್ತಿಗೆಯಾಧಾರದಲ್ಲಿ ಕಟ್ಟಡ ನಿರ್ಮಿಸುತ್ತದೆ. ಕಂಪೆನಿಯೊಂದಿಗೆಕಟ್ಟಡ ನಿರ್ಮಿಸಲು ಒಪ್ಪಂದ ಮಾಡಿದವರಿಂದ ಕಂಪೆನಿಗೆ ಸಿಗಬೇಕಿದ್ದ ಕೊನೆಯ ಮೂರು ಕಂತಿನ ಹಣವನ್ನು ಇನ್‌ವಾಯ್ಸಿನಲ್ಲಿ ಅಕೌಂಟ್ ನಂಬರ್ ತಿದ್ದಿ, ತನ್ನ ಅಕೌಂಟ್ ನಂಬರ್ ಸೇರಿಸಿ ತನ್ನ ಎಕೌಂಟಿಗೆ ಹಣ ಪರಿವರ್ತಿಸಿಕೊಂಡಿದ್ದಾನೆ. 2011ರಲ್ಲಿ ಇಲ್ಲಿ ಕೆಲಸಕ್ಕೆ ಸೇರಿದ್ದ ಹರಿಕುಮಾರ್ 2015ರಲ್ಲಿ ಅಕೌಂಟಿಂಗ್ ವಿಭಾಗದ ಮುಖ್ಯಸ್ಥನಾಗಿ ಭಡ್ತಿ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News