ದುಬೈ: ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ

Update: 2017-04-02 16:22 GMT

ದುಬೈ, ಎ. 2: ದುಬೈ ನಗರದ ಅತ್ಯಂತ ದೊಡ್ಡ ಶಾಪಿಂಗ್ ಮಾಲ್‌ನ ಸಮೀಪ ನಿರ್ಮಾಣ ಹಂತದಲ್ಲಿದ್ದ ವಸತಿ ಸಂಕೀರ್ಣವೊಂದಕ್ಕೆ ರವಿವಾರ ಬೆಂಕಿ ಹತ್ತಿಕೊಂಡಿತು. ಹಲವಾರು ಗಂಟೆಗಳ ಕಾಲ ಉರಿದ ಬೆಂಕಿ ದಟ್ಟ ಹೊಗೆಯ ಮೋಡಗಳನ್ನು ನಗರದ ಆಕಾಶದಲ್ಲಿ ಸೃಷ್ಟಿಸಿತು.

ದುಬೈ ಮಾಲ್ ಪಕ್ಕದ ಕಟ್ಟಡದಲ್ಲಿ ಸ್ಥಳೀಯ ಸಮಯ ಬೆಳಗ್ಗೆ 6:30ಕ್ಕೆ ಬೆಂಕಿ ಕಾಣಿಸಿಕೊಂಡಿತು ಎಂದು ಅಧಿಕಾರಿಗಳು ತಿಳಿಸಿದರು.

ಕಟ್ಟಡದಲ್ಲಿ ಸಿಕ್ಕಿಬಿದ್ದಿದ್ದ ನಾಲ್ವರನ್ನು ನಾಗರಿಕ ರಕ್ಷಣಾ ಸೇವಾ ಸಿಬ್ಬಂದಿ ತೆರವುಗೊಳಿಸಿದರು. ಆ ಪೈಕಿ ಒರ್ವ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಅಹ್ಮದ್ ಅತೀಜ್ ‘ದುಬೈ ಟೆಲಿವಿಶನ್’ಗೆ ತಿಳಿಸಿದರು.

ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ದುಬೈ ಸರಕಾರ ಹೇಳಿದೆ.

ಸ್ಥಳೀಯ ರಿಯಲ್ ಎಸ್ಟೇಟ್ ಕುಳ ‘ಎಮಾರ್’ ವಸತಿ ಸಂಕೀರ್ಣವನ್ನು ನಿರ್ಮಿಸುತ್ತಿತ್ತು ಎಂದು ಸರಕಾರ ತಿಳಿಸಿದೆ.

ವಸತಿ ಸಂಕೀರ್ಣದ ಮೂರು ಕಟ್ಟಡಗಳು ತಲಾ 60 ಮಹಡಿಗಳನ್ನು ಹೊಂದಿದ್ದು, ಮುಂದಿನ ವರ್ಷದ ಎಪ್ರಿಲ್‌ನಲ್ಲಿ ಪೂರ್ಣಗೊಳ್ಳಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News