ಬೇಯ್ಶ್ ಸ್ಪೋರ್ಟ್ಸ್ ಕ್ಲಬ್: ಸಮ್ಮರ್ ಟ್ರೋಫಿ 2017 ಸಮಾರೋಪ

Update: 2017-04-03 05:30 GMT

ಜೀಝಾನ್, ಎ.3: ಸೌದಿ ಅರೇಬಿಯಾ, ಬೇಯ್ಶ್ ನಲ್ಲಿ ಬೇಯ್ಶ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬಡ ಹೆಣ್ಣು ಮಕ್ಕಳ ಮದುವೆಯ ಸಹಾಯಾರ್ಥವಾಗಿ ನಡೆದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ಬೇಯ್ಶ್ ನ ರಾಮಿ ಕ್ರೀಡಾಂಗಣದಲ್ಲಿ  ನಡೆಯಿತು.

ಪಂದ್ಯಾಟದಲ್ಲಿ 16 ತಂಡಗಳು ಭಾಗವಹಿಸಿದ್ದು ಅಂತಿಮವಾಗಿ ಕ್ಯಾಸ್ಟಲ್ ತಂಡವು ಅಕಾ  ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಕ್ಯಾಸ್ಟಲ್ ತಂಡದ ರಶೀದ್ ಮುಕ್ಕ ಹಾಗೂ ಸರಣಿ ಶ್ರೇಷ್ಠರಾಗಿ  ಮನ್ಸೂರ್ ತೀರ್ಥಹಳ್ಳಿ,  ಪಂದ್ಯಕೂಟದ ಉತ್ತಮ ದಾಂಡಿಗರಾಗಿ ಶಕೀಲ್ ಹಾಗೂ ಉತ್ತಮ ಎಸೆತಗಾರರಾಗಿ ದಾವೂದ್ ತೋಡಾರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 

ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಫ್ರೆಟರ್ನಿಟಿ ಫೋರಂನ ಸಲೀಂ ಜಿ ಕೆರೆ, ಮತ್ತು ಮುಹಮ್ಮದ್ ಬಾವಾ ಕೆ ಸಿ ರೋಡ್,  ಹಾಗೂ ಕ್ಯಾಸ್ಟಲ್ ನ ಇಕ್ಬಾಲ್, ಮುಹಮೂದ್ ಕಮೀಸ್ ಮುಷ್ಯತ್, ಫೈಝಲ್ ಏನ್.ಜಿ.ಸಿ ಉಪಸ್ಥಿತರಿದ್ದರು.

 ಸಮಾರಂಭದಲ್ಲಿ  ಕಮೀಸ್ ಮುಷೈತ್, ಅಭಾ ಹಾಗೂ ಜೀಝಾನ್ ಪ್ರಾಂತ್ಯದಲ್ಲಿ ಸತತ ಇಪ್ಪತ್ತೈದು ವರುಷಗಳಿಂದ ಅನಿವಾಸಿಗಳ ಆಶಾಕಿರಣವಾಗಿ  ಸಮಾಜ ಸೇವೆ ಮಾಡುತ್ತಿರುವ ಮುಹಮ್ಮದ್  ಬಾವಾ ಕೆ. ಸಿ.ರೋಡ್ ರವರನ್ನು ಬೇಯ್ಶ್ ಸ್ಪೋರ್ಟ್ಸ್ ಕ್ಲಬ್ ಪರವಾಗಿ ಸನ್ಮಾನಿಸಲಾಯಿತು.

ಬೇಯ್ಶ್ ಸ್ಪೋರ್ಟ್ಸ್ ಕ್ಲಬ್  ತಂಡದ ಸದಸ್ಯರಾದ ಕಲಂದರ್ ನೌಶಾದ್ ಕರ್ನಿರೆ, ಮುಕ್ತಾರ್ ಪಡುಬಿದ್ರಿ, ಜಹೀರ್ ಉಡುಪಿ, ಅರ್ಶಾದ್ ಬಿನ್ ಫಹದ್,  ಹಾಗೂ ಅಬ್ದುಲ್ ಖಾದರ್ ಕಂಚಿನಡ್ಕ  ಪಂದ್ಯಾಕೂಟವನ್ನು ಯಶಸ್ವಿಯಾಗಿ  ಆಯೋಜಿಸಿದರು.

ತೀರ್ಪುಗಾರರಾಗಿ ಮೆಹಬೂಬ್, ಫಹದ್ ಸುರತ್ಕಲ್, ನೌಫಲ್ ಕಾರ್ಯನಿರ್ವಹಿಸಿದರು. ತೌಸೀಫ್ ಹಾಗೂ ನವಾಜ್  ಕಂಚಿನಡ್ಕ ವೀಕ್ಷಕ ವಿವರಣೆಗಾರರಾಗಿ ಮತ್ತು  ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ದಾನಿಗಳಿಂದ ಸಂಗ್ರಹಿಸಿದ ಮೊತ್ತವನ್ನು ಬಡ ಹೆಣ್ಣು ಮಕ್ಕಳ ವಿವಾಹದ ಉದ್ದೇಶಕ್ಕಾಗಿ  ಕುಟುಂಬಕ್ಕೆ ಶೀಘ್ರದಲ್ಲಿ  ಹಸ್ತಾಂತರಿಸಲಾಗುವುದು ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

Writer - ಶಾಹುಲ್ ಹಮೀದ್ ಕಾಶಿಪಟ್ಣ

contributor

Editor - ಶಾಹುಲ್ ಹಮೀದ್ ಕಾಶಿಪಟ್ಣ

contributor

Similar News