ಯುಎಇ: ಕಾನೂನು ಉಲ್ಲಂಘಿಸಿ ರಸ್ತೆದಾಟಿದ 894 ಪಾದಚಾರಿಗಳ ಬಂಧನ

Update: 2017-04-05 11:47 GMT

ಶಾರ್ಜ,ಎ. 5: ರಸ್ತೆಯನ್ನು ದಾಟುವಾಗ ಕಾನೂನು ಉಲ್ಲಂಘಿಸಿದ 894 ಮಂದಿಯನ್ನು ಬಂಧಿಸಿ ದಂಡಹಾಕಲಾಗಿದೆ ಎಂದು ಶಾರ್ಜ ಪೊಲೀಸ್ ಸಂಚಾರಿ ವಿಭಾಗ ತಿಳಿಸಿದೆ.

 ಶಾರ್ಜದ ವಿವಿಧ ರಸ್ತೆಗಳಲ್ಲಿ ಕಾನೂನು ಉಲ್ಲಂಘಿಸಿದವರನ್ನು ಪೊಲೀಸರು ಸೆರೆಹಿಡಿದಿದ್ದರು.ಸಂಚಾರ ಜಾಗೃತಿ ಅಂಗವಾಗಿ ನಡೆಸಿದ ತಪಾಸಣೆಯ ವೇಳೆ ಇಷ್ಟು ಮಂದಿ ಕಾನೂನು ಉಲ್ಲಂಘಕರು ಪೊಲೀಸರ ಬಲೆಗೆ ಬಿದ್ದರು ಎಂದು ಶಾರ್ಜ ಪೊಲೀಸ್ ಟ್ರಾಫಿಕ್ ಜಾಗೃತಿ ವಿಭಾಗ ನಿರ್ದೇಶಕ ಮೇಜರ್ ಜನರಲ್ ಅಬ್ದುರ್ರಹ್ಮಾನ್ ಕತ್ತರ್ ಹೇಳಿದರು.

 ರಸ್ತೆದಾಟುವ ಸಿಗ್ನಲ್ ಇಲ್ಲದ ಕಡೆಗಳಲ್ಲಿ ಝೀಬ್ರ ಗೆರೆಗಳಿವೆ. ಅದರ ಮೂಲಕವೇ ರಸ್ತೆ ದಾಟಬೇಕು. ಇಂತಹ ಕಡೆಗಳಲ್ಲಿ ವಾಹನಚಾಲಕರು ಪಾದಚಾರಿಗಳು ದಾಟಲು ಅವಕಾಶ ಸೃಷ್ಟಿಸಬೇಕು ಎಂದು ರಹ್ಮಾನ್ ಕತ್ತರ್ ಸ್ಪಷ್ಟಪಡಿಸಿದ್ದಾರೆ.

ಆದರೆ ಅಲ್ ನಹ್ದ, ಅಲ್‌ಖಾರ್, ಅಲ್‌ತಾವೂನ್ ರಸ್ತೆಗಳಲ್ಲಿ ರಸ್ತೆದಾಟಲು ಝೀಬ್ರ ಗೆರಗಳಿಲ್ಲ ಸಿಗ್ನಲ್‌ಗಳೂ ಇಲ್ಲ. ಆದ್ದರಿಂದ ಪಾದಚಾರಿಗಳು ಇಷ್ಟು ಹೆಚ್ಚು ಸಂಖ್ಯೆಯಲ್ಲಿ ನಿಯಮ ಉಲ್ಲಂಘಿಸಿದರು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News