ಅಕ್ರಮ ವಲಸಿಗರಿಗೆ ಕ್ಷಮೆ: ಬಳಿಕವೂ ಉಳಿದರೆ 10ವರ್ಷ ನಿಷೇಧ !
ರಿಯಾದ್, ಎ.6: ಸೌದಿ ಅರೇಬಿಯದ ಸಾರ್ವಜನಿಕ ಕ್ಷಮೆಯ ಕಾಲಾವಧಿಯಲ್ಲಿ ದೇಶ ಬಿಟ್ಟು ಹೋಗದ ವಿದೇಶಿಯರಿಗೆ ಹತ್ತುವರ್ಷ ಸೌದಿ ಪ್ರವೇಶಿಸದಂತೆ ನಿಷೇಧಹೇರಲಾಗುವುದು ಎಂದು ಸೌದಿ ಜವಾಸತ್(ದೂತವಾಸ) ಎಚ್ಚರಿಕೆ ನೀಡಿದೆ. ಸಾರ್ವಜನಿಕ ಕ್ಷಮೆಯ ಅವಧಿಯ ನಂತರ ನಡೆಸಲಾಗುವ ತಪಾಸಣೆಯಲ್ಲಿ ಸಿಕ್ಕಿಬೀಳುವ ಅಕ್ರಮ ವಾಸ ಮುಂದುವರಿಸಿದವರನ್ನು ಕ್ರಿಮಿನಲ್ ಅಪರಾಧಿಗಳೆಂದು ಪರಿಗಣಿಸಿ ಕ್ರಮವನ್ನು ಜರಗಿಸಲಾಗುವುದು. ಶಿಕ್ಷೆ ಕ್ರಮ ಪೂರ್ತಿಯಾದರೆ ನಂತರ ಹತ್ತುವರ್ಷ ಕಳೆದ ನಂತರವೇ ಇವರು ಸೌದಿಗೆ ಹೊಸ ವೀಸಾದಲ್ಲಿ ಬರುವ ಅವಕಾಶ ಇದೆ. ಎಂದು ಜವಾಸತ್ ಪಬ್ಲಿಕ್ ಅಡ್ಮಿಸ್ಟ್ರೇಟಿವ್ ಆಂಡ್ ಮೀಡಿಯ ರಿಲೇಶನ್ಸ್ ಮೇನೇಜರ್ ಕರ್ನಲ್ ಮುಹಮ್ಮದ್ ಬಿನ್‌ಅಬ್ದುಲ್ ಅಝೀಝ್ ಅಲ್‌ಸಅದ್ ತಿಳಿಸಿದ್ದಾರೆ.
ಸಾರ್ವಜನಿಕ ಕ್ಷಮೆ ಸಮಯದಲ್ಲಿ ಸಿಗುವ ಎಕ್ಸಿಟ್ ವೀಸಾಕ್ಕೆ ಎರಡು ತಿಂಗಳ ಸಮಯವಿದೆ. ಅಧರೆ ಎರಡು ತಿಂಗಳು ಇದೆಯಲ್ಲವೇ ಎಂದು ಭಾವಿಸಿ ಸೌದಿಯಲ್ಲಿ ನಿಲ್ಲುವಂತಿಲ್ಲ. ಸಾರ್ವಜನಿಕ ಕ್ಷಮೆಯ ಕಾಲಾವಧಿ ಮುಗಿಯುವ ಮೊದಲು ಸೌದಿಯಿಂದ ಹೊರಹೋಗಿರಬೇಕು. ಈಗ ಉದ್ಯೋಗ, ವಾಸಸ್ಥಳದ ಕಾನೂನು ಉಲ್ಲಂಘಿಸಿದವರಿಗೆ , ನುಸುಳುಕೋರರಿಗೆ ಯಾವುದೇ ದಂಡ, ಜೈಲು ಶಿಕ್ಷೆಯಿಲ್ಲದೆ ಊರಿಗೆ ಹೋಗುವ ಅವಕಾಶವನ್ನು ಮಾಡಿಕೊಡಲಾಗಿದೆ.ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕರ್ನಲ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ಹೇಳಿದ್ದಾರೆ.