×
Ad

ಕತರ್‌ನಲ್ಲಿ ಹಾರುವ ಕಣ್ಣಿನ ಆಸ್ಪತ್ರೆ

Update: 2017-04-06 15:06 IST

ದೋಹ,ಎ. 6: ಹಾರುವ ಕಣ್ಣಿನ ಆಸ್ಪತ್ರೆ ಎಂದು ಕರೆಯಲಾಗುವ ಆರ್ಬಿಸ್ ಪ್ಲೈಯಿಂಗ್‌ಐ ಹಾಸ್ಪಿಟಲ್ ಕತರ್‌ಗೆ ಬಂದಿಳಿದಿದೆ. ಕತರ್ ಅಭಿವೃಧ್ಧಿ ನಿಧಿಯ ಸಹಾಯದೊಂದಿಗೆ ಕತರ್ ಚ್ಯಾರಿಟಿ ನಡೆಸುವ ಕತರ್ ಕ್ರಿಯೇಟಿಂಗ್ ವಿಷನ್ ಎನ್ನುವ ಕಣ್ಣಿಗೆ ಸಂಬಂಧಿಸಿದ ಯೋಜನೆಯ ಅಂಗವಾಗಿ ಹಾರುವ ಕಣ್ಣಿನ ಆಸ್ಪತ್ರೆ ಕತರ್‌ಗೆ ಬಂದಿಳಿದಿದೆ.

  2016ರಲ್ಲಿ ಜೂನ್‌ನಲ್ಲಿಟೆಕ್ಸಾಸ್‌ನಲ್ಲಿ ಜಗತ್ತಿನ ಪ್ರಮುಖ ಎನ್‌ಜಿಒ ಆದ ಆರ್ಬಿಸ್ ವಿಮಾನದಲ್ಲಿ ಕಣ್ಣಾಸ್ಪತ್ರೆಯ ಹಾರಾಟಕ್ಕೆ ಚಾಲನೆ ನೀಡಿತ್ತು. ವಿವಿಧ ದೇಶಗಳಿಗೆ ಹೋಗಿ ಕಣ್ಣಿನ ರೋಗಿಗಳಿಗೆ ಚಿಕಿತ್ಸೆ ಕೊಡುವ ಉದ್ದೇಶದಿಂದ ವಿಮಾನದಲ್ಲಿ ಕಣ್ಣಾಸ್ಪತ್ರೆಯನ್ನು ಅದು ತೆರೆದಿತ್ತು. ಈ ವರೆಗೆ ಅದು ವಿವಿಧ ದೇಶಗಳಲ್ಲಿ ಹಾರಾಟನಡೆಸಿದೆ. ಅಲ್ಲಿನ ಕಣ್ಣಿನ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಕತರ್ ಕ್ರಿಯೇಟಿಂಗ್ ವಿಷನ್ ಎನ್ನುವ ಯೋಜನೆಯ ಅಂಗವಾಗಿ ಹಾರುವ ಕಣ್ಣಾಸ್ಪತ್ರೆ ಕತರ್‌ಗೆ ಬಂದಿಳಿದೆ. ನೋಡಲು ಈ ಆಸ್ಪತ್ರೆ ವಿಮಾನ ಇತರ ಸಾಮಾನ್ಯ ವಿಮಾಗಳಂತೆ ಇದೆ. ಒಳಭಾಗದಲ್ಲಿ ಅತ್ಯಾಧುನಿಕ ಆಪರೇಷನ್ ಥಿಯೇಟರ್ ಇದೆ. 46 ಸೀಟುಗಳನ್ನು ಹೊಂದಿದೆ. ಪ್ರೀಪೋಸ್ಟ್ ಆಪರೇಷನ್ ಸ್ಪೇಸ್ ಮತ್ತು ಲೇಸರ್ ಸ್ಯೂಟ್ ಇತ್ಯಾದಿಗಳನ್ನು ಈವಿಮಾನದಲ್ಲಿ ಸಜ್ಜೀಕರಿಸಲಾಗಿದೆ. ಕತರ್ ಕ್ರಿಯೇಟಿಂಗ್ ವಿಷನ್ ಯೋಜನೆಯು

  ಭಾರತ,ಬಾಂಗ್ಲಾದೇಶದ 4,73,000 ರಷ್ಟು ಮಕ್ಕಳ ನೇತ್ರರೋಗಕ್ಕೆ ಉತ್ತಮ ಚಿಕಿತ್ಸೆಯನ್ನು ಕೊಡಿಸುವ ನಿಟ್ಟಿನಲ್ಲಿ ಕತರ್ ಚ್ಯಾರಿಟಿಯ ಅಧೀನದ ಮಹಾನ್ ಯೋಜನೆಯಾಗಿದೆ. 2015ರಲ್ಲಿ ಚ್ಯಾರಿಟಿ ಮತ್ತು ಆರ್ಬಿಸ್ ಸೇರಿ ಬಾಂಗ್ಲಾದೇಶದಲ್ಲಿ ಅಂಧ ಮಕ್ಕಳ ಚಿಕಿತ್ಸೆಗಾಗಿ ಎರಡು ಮಿಲಿಯನ್ ರಿಯಾಲ್ ವ್ಯಯಿಸಿದೆಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News