×
Ad

​ಪೊಲೀಸ್ ದೌರ್ಜನ್ಯ: ಕರ್ನಾಟಕ ಲೇಖಕರ ಸಂಘ ಅಬುಧಾಬಿ ಘಟಕ ಖಂಡನೆ

Update: 2017-04-06 16:53 IST

ಅಬುಧಾಬಿ, ಎ.6: ಅಮಾಯಕ ಮುಸ್ಲಿಂ ಯುವಕ ಅಹ್ಮದ್ ಖುರೈಸ್ ನನ್ನು ವಿನಾಕಾರಣ ಬಂದಿಸಿ ಚಿತ್ರ ಹಿಂಸೆ ಕೊಟ್ಟು ಆತನ ಕಿಡ್ನಿ ನಿಷ್ಕ್ರಿಯಗೊಳಿಸಿದ ಮಂಗಳೂರ ಪೊಲೀಸರ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದವರ ವಿರುದ್ಧ ವಿನಾ ಕಾರಣ ಲಾಠಿ ಚಾರ್ಜ್ ಮಾಡಿರುವ ಘಟನೆಯನ್ನು ಕರ್ನಾಟಕ ಲೇಖಕರ ಸಂಘ ಅಬುಧಾಬಿ ಘಟಕ ಬಲವಾಗಿ  ಖಂಡಿಸುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅನುಮತಿಯ ನೆಪ ಹೇಳುವವರು ಚಿಂತಿಸಬೇಕಾಗಿರುವುದು ಪ್ರತಿಭಟನೆಯ ಕಾರಣ ಖುರೇಷಿ ಎಂಬ ಯುವಕನ ಕಾನೂನು ಬಾಹಿರ ಬಂಧನ ಮತ್ತು ಚಿತ್ರ ಹಿಂಸೆ, ಇದಕ್ಕೆ ಪೊಲೀಸರು ಯಾವ ಕಾನೂನಿನ ಅನುಮತಿ ಪಡೆದಿದ್ದಾರೆ? ವೀಡಿಯೋ ಮೂಲಕ ಪೊಲೀಸರ ಘೋರ ಪೈಶಾಚಿಕ ಕ್ರಮವನ್ನು ಸ್ಪಷ್ಟವಾಗಿ ಕಾಣಬಹುದು. ಇದನ್ನು ಮುಸ್ಲಿಂ ಸಮುದಾಯದ ಎಲ್ಲಾ ಸಂಘಟನೆಗಳು ಖಂಡಿಸಿದ್ದಾರೆ,ಇದು ಒಳ್ಳೆಯ ಬೆಳವಣಿಗೆ ಆಗಿದೆ.

ತಪ್ಪು ಮಾಡಿದ ಸಿಸಿಬಿ ಪೊಲೀಸರು ಮತ್ತು ಲಾಠಿ ಚಾರ್ಜಿಗೆ ಕಾರಣಕರ್ತರಾದ ಪೊಲೀಸ್ ಕಮೀಷನ್ ರನ್ನು ಕಾನೂನಿನ ಮುಂದೆ ತಂದು ಸೂಕ್ತ ಕ್ರಮ ಕೈಗೊಳ್ಳುವವರೆಗೆ ಪ್ರತೀಯೊಬ್ಬರು ತಮ್ಮ ಹೋರಾಟವನ್ನು ಮುಂದುವರಿಸಬೇಕಾಗಿದೆ. ನ್ಯಾಯಕ್ಕಾಗಿ ಸಂವಿಧಾನತ್ಮಕವಾಗಿ ನಡೆಯುವ ಎಲ್ಲಾ ಹೋರಾಟಗಳಿಗೂ ಸಂಪೂರ್ಣ ಬೆಂಬಲಿಸುವುದಾಗಿ ಕರ್ನಾಟಕ ಲೇಖಕರ ಸಂಘ ಅಬುಧಾಬಿ ಘಟಕ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News