×
Ad

ಸೌದಿ ಅರೇಬಿಯಾ: ತಬೂಕ್ ಸಮೀಪ ಅಗಲ್ ನಲ್ಲಿ ನಡೆದ ಅಫಘಾತದಲ್ಲಿ ಮೃತರಾದ ಪುತ್ತೂರಿನ ಮೂವರ ದಫನ ಕಾರ್ಯ

Update: 2017-04-07 19:26 IST

ಸೌದಿ ಅರೇಬಿಯಾ, ಎ.7: ಮಾ.31ರಂದು ಸೌದಿ ಅರೇಬಿಯಾದ ತಬೂಕಿನ ಹತ್ತಿರದ ಅಗಲ್ ಎಂಬಲ್ಲಿ ನಡೆದ ವಾಹನ ಅಪಘಾತದಲ್ಲಿ  ಮೃತಪಟ್ಟ ಪುತ್ತೂರು ತಾಲೂಕಿನ ಸಾಲ್ಮರ ನಿವಾಸಿಗಳಾದ  ವಝೀರ್ ಅಹ್ಮದ್, ಅವರ ಸಹೊದರಿ ಕಮರು ಬಾನು ಮತ್ತು ಅವರ ಚಿಕ್ಕ ಕಂದಮ್ಮ ಇಹಾನ್ ಅಬ್ದುಲ್ ರಹಿಮಾನ್ ದಫನ ಕಾರ್ಯದ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿತು.  

ಮರಣ ವಾರ್ತೆ ಅರಿಯುತ್ತಿದ್ದಂತೆ ಮುಂದಿನ ಪ್ರಕ್ರಿಯೆಗಾಗಿ  ಇಂಡಿಯನ್ ಸೋಶಿಯಲ್ ಫೋರಂ ತಬೂಕ್ ಘಟಕದ ನೇತೃತ್ವದ ಒಂದು ತಂಡ ರಚಿಸಲಾಯಿತು. ಈ ತಂಡದಲ್ಲಿದ್ದ ಅನೀಸ್ ಸಾಲ್ಮಾರ ಅಝರ್ ಸುರತ್ಕಲ್, ತಾಜುದ್ದೀನ್ ಸಾಲ್ಮಾರ ರಿಯಾದ್, ಲೆತೀಫ್ ಉಪ್ಪಿನಂಗಡಿ, ಖಾದರ್ ಕಣ್ಣಂಗಾರ್, ಬಶೀರ್ ಉಪ್ಪಿನಂಗಡಿ, ಫಯಾಝ್ ಜೋಕಟ್ಟೆ ಇವರ ತಂಡದ ಸತತ ಪ್ರಯತ್ನದಲ್ಲಿ, ದಫನಕ್ಕಾಗಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ದಫನ ಕಾರ್ಯವು ಬೇಗನೇ ನೆರವೇರಿಸಲು ಸಹಾಯಿಯಾದರು. 

ಶೌಕತ್ ಕೇರಳ ಅಗಲ್, ಅಯ್ಯೂಬ್ ಕಡಂಬು, ಮುನೀರ್ ಮೂಡಬಿದ್ರೆ ಹಾಗೂ ಅಬ್ದುಲ್ ರಹಿಮಾನ್ ಕೀನ್ಯ ಇವರ ಸಹಕಾರವು ಈ ತಂಡದ ಮೇಲಿತ್ತು.
ಅಸರ್ ನಮಾಝಿನ ಬಳಿಕ ಅಗಲ್ ನಲ್ಲಿ ನಡೆದ ದಫನ ಕಾರ್ಯದಲ್ಲಿ ನೂರಾರು ಆನಿವಾಸಿಗರೂ, ಕುಟುಂಬಿಕರು, ಗೆಳೆಯರು ಭಾಗವಹಿಸಿದ್ದರು.

ಇನ್ನುಳಿದ ಗಾಯಾಳುಗಳಲ್ಲಿ ಗಂಭೀರ ಗಾಯಗೊಂಡಿದ್ದ ಜಬ್ಬಾರ್ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಬೂಕಿನ ಕಿಂಗ್ ಖಾಲಿದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News