ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮದೀನಾ ಶಾಖೆ ವತಿಯಿಂದ ವಿಶೇಷ ತರಗತಿ ಹಾಗು ಸನ್ಮಾನ ಕಾರ್ಯಕ್ರಮ
ಮದೀನಾ, ಎ.7: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿ.ಕೆ.ಎಸ್.ಸಿ) ಇದರ ಮದೀನಾ ಶಾಖೆಯ ವತಿಯಿಂದ "ವಿಶೇಷ ತರಗತಿ ಹಾಗು ಸನ್ಮಾನ ಕಾರ್ಯಕ್ರಮ" ನಗರದ ದಾರುತ್ತೈಬಾ -5 ನಲ್ಲಿ ಮಾ.28ರಂದು ನಡೆಯಿತು. ದಾರುಲ್ ಇರ್ಷಾದ್ ಮಾಣಿ ಇದರ ಅಧ್ಯಾಪಕರಾದ ಉಮರ್ ಸಖಾಫಿ ಉದ್ಘಾಟನೆ ನಡೆಸಿಕೊಟ್ಟರು.
ಮದೀನಾದ ಬಗ್ಗೆ ಮಾತನಾಡಿದ ಶೈಖುನಾ ಬೇಕಲ್ ಉಸ್ತಾದ್, ಪುಣ್ಯ ಪ್ರವಾದಿ ಬದುಕಿದ್ದ ಹಾಗು ವಫಾತ್ ಆಗಿರುವ ಈ ನಾಡಿನಲ್ಲಿ ಅದೆಷ್ಟು ಸೂಕ್ಷ್ಮತೆಯಿಂದ ಬದುಕು ನಡೆಸಿದರೂ ಸಾಲದು, ಅತ್ಯಂತ ಸಜ್ಜನಿಕೆಯಿಂದ,ಮರ್ಯಾದೆಯಿಂದ ಬದುಕು ನಾವು ಸಾಗಿಸಬೇಕೆಂದುಹೇಳಿದರು.
ಮರ್ಕಝ್ ತಹ್ಲೀಮುಲ್ ಇಹ್ಸಾನ್ ಶರೀಯತ್ ಕಾಲೇಜ್ ಮೂಳೂರು ಇದರ ಪ್ರಾಂಶುಪಾಲರೂ,ಉಡುಪಿ ಹಾಗು ಹಲವು ಜಿಲ್ಲೆಗಳ ಖಾಝಿಗಳೂ ಆಗಿರುವ ಬೇಕಲ ಉಸ್ತಾದರನ್ನು ಶಾಲು ಹೊದಿಸಿ ಅಧ್ಯಕ್ಷರಾದ ಮಹಮ್ಮದ್ ಅಲಿ ಪಾಣೆಮಂಗಳೂರು ಹಾಗು ಗೌರವಾಧ್ಯಕ್ಷ ಶರೀಫ್ ಮರವೂರು ಸನ್ಮಾನಿಸಿ ಗೌರವಿಸಿದರು.
ಖಜಾಂಜಿ ಬಶೀರ್ ಅಳಕೆ,ಸಿಲ್ವರ್ ಕಾರ್ಡ್ ಉಸ್ತುವಾರಿ ಹೊತ್ತಿರುವ ಅಬ್ದುಲ್ ರಝಾಕ್ ಅಳಕೆಮಜಲು ಉಸ್ತಾದ್ ರಿಗೆ ಕಿರು ಸ್ಮರಣಿಕೆ ನೀಡಿ ಗೌರವಿಸಿದರು.