ಭಾರತೀಯರ ಅದ್ದೂರಿ ಮದುವೆಗಳಿಗೆ ವೇದಿಕೆಯಾಗಲಿದೆ ಬಹರೈನ್
ಮನಾಮ,ಎ.8: ಅದ್ದೂರಿ ಮದುವೆಗಳಿಗೆ ಖ್ಯಾತಿಗಳಿಸಿದ ಭಾರತೀಯರಮದುವೆಗಳಿಗೆ ವೇದಿಕೆಯಾಗಲು ಬಹ್ರೈನ್ ಸಿದ್ಧವಾಗಿದೆ. ಬಹರೈನ್ಅನ್ನು ದೊಡ್ಡಮದುವೆ ವೇದಿಕೆಯನ್ನಾಗಿ ಮಾಡುವ ಉದ್ದೇಶದಲ್ಲಿ ಬಹರೈನ್ ಪ್ರವಾಸೋಧ್ಯಮ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರವು (ಬಿಟಿಇಎ) ಯೋಜನೆಯೊಂದನ್ನು ರೂಪಿಸಿದೆ.
ಈ ಯೋಜನೆಯಡಿಯಲ್ಲಿ ಮೊತ್ತಮೊದಲಭಾರತೀಯ ಮದುವೆ ಎಪ್ರಿಲ್ ತಿಂಗಳ ಕೊನೆಗೆ ನಡೆಯಲಿದೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿಮಾಡಿದೆ. ಬಹರೈನ್ ಈ ಯೋಜನೆಯಲ್ಲಿ ಭಾರತ ಮತ್ತು ಸೌದಿಅರೇಬಿಯವನ್ನು ಮುಖ್ಯ ಗುರಿಯನ್ನಾಗಿ ಮಾಡಿಕೊಂಡಿದೆ. ಇಲ್ಲಿನ ಮದುವೆಗಳನ್ನು ಆಕರ್ಷಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಬಿಟಿಇಎ ಸಲಹೆಗಾರ ಡಾ. ಅಲಿ ಹಸನ್ ಫುಲಾದ್ ಹೇಳಿದರು. ಇಲ್ಲಿ ಈ ಯೋಜನೆಯಡಿ ನಡೆಯುವ ಮೊದಲನೆ ಮದುವೆಗೆ ಭಾರತದಿಂದ ಸುಮಾರು ಒಂದು ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಬಿಟಿಇಎಯ ಸಿಇಒ ಶೇಕ್ ಖಾಲಿದ್ ಬಿನ್ ಹಮೂದ್ ಅಲ್ ಖಲೀಫ ಹೇಳಿದರು. ಬಹರೈನ್‌ನ ಇಂಡಿಯ ಬಿಸಿನೆಸ್ ಫೋರಂನಲ್ಲಿ ಅವರು ಮಾತಾಡುತ್ತಿದ್ದರು. ಬಹ್ರೈನ್ ಮದುವೆ ದ್ವೀಪ ಎನ್ನುವ ನೆಲೆಯಲ್ಲಿ ಪ್ರಸಿದ್ಧವಾಗುವುದನ್ನು ಅವರು ಬಯಸಿದ್ದಾರೆ.