×
Ad

ಸೌದಿಯಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತಿದೊಡ್ಡ ಸಾಂಸ್ಕೃತಿಕ, ಪ್ರವಾಸಿ ಹಾಗೂ ಕ್ರೀಡಾ ನಗರ

Update: 2017-04-09 16:55 IST

ರಿಯಾದ್, ಎ.9: ಜಗತ್ತಿನ ಅತಿದೊಡ್ಡ ಸಾಂಸ್ಕೃತಿಕ , ಪ್ರವಾಸಿ, ಕ್ರೀಡಾನಗರವನ್ನುಸೌದಿ ಅರೇಬಿಯದ ರಾಜಧಾನಿ ನಗರದಲ್ಲಿ ನಿರ್ಮಿಸಲಾಗುವುದು ಎಂದು ಸೌದಿ ರಾಜಕುಮಾರ ದೊರೆಯ ಉತ್ತರಾಧಿಕಾರಿ ಹಾಗೂ ರಕ್ಷಣಾಸಚಿವ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಪ್ರಕಟಿಸಿದ್ದಾರೆ. ಅವರು ಸೌದಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಕೂಡಾ ಆಗಿದ್ದಾರೆ. ಸೌದಿ ವಿಷನ್ 2030ರ ಅಂಗವಾಗಿ ಅಸ್ತಿತ್ವಕ್ಕೆ ಬರಲಿರುವ ಅಲ್‌ಖಿದಿಯ್ಯ ಯೋಜನೆಗೆ 2018ರಲ್ಲಿ ಶಿಲನ್ಯಾಸ ನಡೆಯಲಿದೆ. ರಾಜಧಾನಿನಗರದ ದಕ್ಷಿಣದಲ್ಲಿ ಮತ್ತು ಪಶ್ಚಿಮ ಮುಸಾಹಮಿಯ್ಯ ಸಮೀಪದಲ್ಲಿ ಮಕ್ಕ ಹೈವೆಗೆ 65 ಕಿಲೊಮೀಟರ್ ದೂರದಲ್ಲಿ 334 ಕಿಲೊಮೀಟರ್ ಸುತ್ತಳತೆ ವಿಸ್ತಾರದ ಅಲ್‌ಖಿದಿಯ್ಯ ನಗರ ಸ್ಥಾಪನೆಗೊಳ್ಳಲಿದೆ. ಯೋಜನೆ 2022ರಲ್ಲಿ ಪೂರ್ಣಗೊಳ್ಳಲಿದೆ.

 ಆರ್ಥಿಕ ಕ್ಷೇತ್ರದ ಬೃಹತ್ ಜಾಗೃತಿಮತ್ತು ಪೆಟ್ರೋಲಿಯಮೇತರ ಆದಾಯ ಗಳಿಕೆಯ ಉದ್ದೇಶದಿಂದ ಮತ್ತು ಯುವಕರಿಗೆ ಉದ್ಯೋಗವಕಾಶ ಸೃಷ್ಟಿಸುವುದಕ್ಕಾಗಿ ಅಲ್‌ಖಿದಿಯ್ಯ ಯೋಜನೆ ಉಪಯುಕ್ತ ಎನಿಸಲಿದೆ. ಅಂತಾರಾಷ್ಟ್ರೀಯ ಗುಣಮಟ್ಟದ 100ವಾಸಕೇಂದ್ರಗಳು, ಸಿಕ್ಸ್ ಫ್ಲಾಗ್ಸ್ ಎನ್ನುವ ಪ್ರವಾಸಿಗರಿಗೆ ನೆಚ್ಚಿನ ನಗರವು ಅಲ್‌ಖಿದಿಯ್ಯದ ಮುಖ್ಯ ಆಕರ್ಷಣೆಯಾಗಲಿದೆ. ಜೊತೆ ಸ್ಪೋರ್ಟ್ಸಸಿಟಿ, ಹೊಟೇಲು ಸೌಕರ್ಯಗಳು ಕೂಡಾ ಅಲ್‌ಖಿದಿಯ್ಯದಲ್ಲಿರಲಿವೆ ಎಂದು ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News