ಸಿ.ಎಂ. ಸೆಂಟರ್ ದಮಾಮ್ ಸಮಿತಿ ಪದಾಧಿಕಾರಿಗಳ ಆಯ್ಕೆ
Update: 2017-04-09 19:22 IST
ದಮಾಮ್, ಎ.9: ಸಿ.ಎಂ. ಸೆಂಟರ್ ದಮಾಮ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ದಮ್ಮಾಮ್ ಸಅದಿಯ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.
ಯೂಸುಫ್ ಸಅದಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಶೀರ್ ಸಅದಿ ಕೊಪ್ಪ ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದರು. ನಿರ್ದೇಶಕ ಮಂಡಳಿಗೆ ಯೂಸುಫ್ ಸಅದಿ ಕೊಡಗು ಹಾಗೂ ಉಸ್ಮಾನ್ ಮಂಜನಾಡಿ ಆಯ್ಕೆಯಾದರು.
ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮುಸ್ಲಿಯಾರ್ ಮದನಿ ನಗರ್, ಉಪಾಧ್ಯಕ್ಷರುಗಳಾಗಿ ಕಾಸಿಂ ಮುಸ್ಲಿಯಾರ್ ಅಡ್ಡೂರ್, ಇಬ್ರಾಹೀಂ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ K.A. ಕೊಡಗು, ಕಾರ್ಯದರ್ಶಿಗಳಾಗಿ ಹಬೀಬ್ ಸಖಾಫಿ, ಇಕ್ಬಾಲ್ ಕೈರಂಗಳ, ಸಲೀಂ ಚಿಕ್ಕ ಮಂಗಳೂರು, ಕೋಶಾಧಿಕಾರಿಗಳಾಗಿ ಅಬ್ದುಲ್ ಖಾದರ್ ಹಾಜಿ ಸಕಲೇಶಪುರ ಮತ್ತು 30 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಆಬಿದ್ ಕೊಡಗು ಸ್ವಾಗತಿಸಿದರು. ಹಬೀಬ್ ಸಖಾಫಿ ವಂದಿಸಿದರು.